ಕರ್ನಾಟಕ

karnataka

ETV Bharat / state

ಉಕ್ರೇನ್​ನಿಂದ ಜಿಲ್ಲೆಯ 7 ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್ : ಚಿಕ್ಕಮಗಳೂರು ಡಿಸಿ​​ - ಜಿಲ್ಲಾಧಿಕಾರಿ ಕೆ.ಎನ್ ರಮೇಶ ಹೇಳಿಕೆ

ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮಗೆ ಉತ್ತಮ ಸ್ಪಂದನೆ ನೀಡಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಒಳ್ಳೆ ಉದ್ದೇಶ ಇಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಹೊರ ಬರುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು..

Chikkamagaluru DC press meet
ಚಿಕ್ಕಮಗಳೂರು ಡಿಸಿ ಸುದ್ದಿಗೋಷ್ಠಿ

By

Published : Mar 11, 2022, 2:07 PM IST

ಚಿಕ್ಕಮಗಳೂರು :ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ 7 ಮಂದಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್​​ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ ಹೇಳಿದರು.

ಉಕ್ರೇನ್‌ನಿಂದ ವಿದ್ಯಾರ್ಥಿಗಳು ವಾಪಸ್ ಆಗಿರುವ ಕುರಿತಂತೆ ಚಿಕ್ಕಮಗಳೂರು ಡಿಸಿ ಕೆ.ಎನ್ ರಮೇಶ ಮಾಹಿತಿ ನೀಡಿರುವುದು..

ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಉಕ್ರೇನ್‌ನಲ್ಲಿ ಜಿಲ್ಲೆಯ ಒಟ್ಟು 11 ವಿದ್ಯಾರ್ಥಿಗಳಿದ್ದರಾದರೂ, 4 ಮಂದಿ ಯುದ್ಧ ಆರಂಭವಾಗುವ ಮುನ್ನವೇ ಹಿಂತಿರುಗಿದ್ದರು. ಇನ್ನುಳಿದ 7 ಮಂದಿಯನ್ನು ಭಾರತ ಸರ್ಕಾರ ಹಾಗೂ ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸಹಕಾರದಿಂದ ಸುರಕ್ಷಿತವಾಗಿ ಕರೆತರಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದರು.

ನಮ್ಮ ದೇಶ ಸೇರಿದಂತೆ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷರೊಂದಿಗೆ ಚರ್ಚಿಸಿ ತಾತ್ಕಾಲಿಕ ಯುದ್ಧ ವಿರಾಮ ಘೋಷಣೆಗೂ ಶ್ರಮಿಸಿದ್ದಾರೆ.

ಈಗ ವಾಪಸ್​​ ಆಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದೆ ವಿದ್ಯಾಭ್ಯಾಸ ಸೇರಿದಂತೆ ಇತರೆ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಲಿವೆ. ಈ ಹಿನ್ನೆಲೆ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಜಿಲ್ಲಾಡಳಿತದಿಂದ ಒಂದು ವಾಟ್ಸ್‌ಆ್ಯಪ್​​ ಗ್ರೂಪ್ ಮಾಡಿ ಸರ್ಕಾರದಿಂದ ಸಿಗಬಹುದಾದ ನೆರವು, ಸಹಕಾರದ ಬಗ್ಗೆ ಕೈಜೋಡಿಸಬೇಕು ಎನ್ನುವ ಚಿಂತನೆ ಮಾಡಿದ್ದೇವೆ.

ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮಗೆ ಉತ್ತಮ ಸ್ಪಂದನೆ ನೀಡಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಒಳ್ಳೆ ಉದ್ದೇಶ ಇಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಹೊರ ಬರುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು.

ಯುದ್ಧದ ಸಂದರ್ಭವಾಗಿದ್ದರಿಂದ ಮೊದಲ ಕೆಲವು ದಿನಗಳು ನಮಗೂ ಆತಂಕ ಉಂಟಾಗಿತ್ತು. ಸರಿಯಾದ ಸಂಪರ್ಕ ಸಿಗದೆ ವಿದ್ಯಾರ್ಥಿಗಳು ತೊಂದರೆಯಲ್ಲಿ ಸಿಲುಕಿರುವ ಕುರಿತು ಚಿಂತೆ ಉಂಟಾಗಿತ್ತು. ನಂತರದ ದಿನಗಳಲ್ಲಿ ಪ್ರಧಾನಮಂತ್ರಿ ಕಚೇರಿ ಮಧ್ಯಪ್ರವೇಶ ಮಾಡಿ ಅಲ್ಲಿಂದ ರಾಜತಾಂತ್ರಿಕ ಮಾತುಕತೆಗಳು ನಡೆದಾಗ ಸ್ವಲ್ಪ ಹಗುರಾಯಿತು. ಭಾರತ ಬಿಟ್ಟರೆ ಬೇರಾವ ದೇಶವೂ ತಮ್ಮ ದೇಶದ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿಲ್ಲ. ಇಂದಿನ ಪರಿಸ್ಥಿತಿಯಲ್ಲಿ 'ಆಪರೇಷನ್ ಗಂಗಾ' ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಕರೆ ತಂದ ಮೊದಲ ದೇಶ ಭಾರತ ಎಂದು ವಿದ್ಯಾರ್ಥಿಗಳು ಹೇಳಿದರು.

ಇದನ್ನೂ ಓದಿ:ಸಮಾಧಿಯಂತಾದ ಉಕ್ರೇನ್​ಗೆ ಚೀನಾ ಸಹಾಯ ಮಾಡಲು ಸಿದ್ಧ​ : ಪ್ರಧಾನಿ ಲಿ ಕೆಕಿಯಾಂಗ್‌

ABOUT THE AUTHOR

...view details