ಚಿಕ್ಕಮಗಳೂರು: ಓರ್ವ ಪಿಎಸ್ಐ, ಏಳು ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳು ಅಮಾನತು - Sevan Police constables suspended
![ಚಿಕ್ಕಮಗಳೂರು: ಓರ್ವ ಪಿಎಸ್ಐ, ಏಳು ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳು ಅಮಾನತು ಚಿಕ್ಕಮಗಳೂರು ಜಿಲ್ಲೆ](https://etvbharatimages.akamaized.net/etvbharat/prod-images/768-512-9702832-thumbnail-3x2-bng.jpg)
12:27 November 29
ಕರ್ತವ್ಯಲೋಪ ಆರೋಪದಡಿ ಓರ್ವ ಪಿಎಸ್ಐ ಮತ್ತು 7ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿರುವ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು:ಕರ್ತವ್ಯಲೋಪ ಆರೋಪದಡಿ ಬಸವನಹಳ್ಳಿ ಪಿಎಸ್ಐ ಮತ್ತು 07 ಜನ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖೇತ್ ಸೇರಿದಂತೆ ಯುವರಾಜ್, ಲಕ್ಷ್ಮಣ್, ಪ್ರದೀಪ್ ಎಂಬ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಸಿಬ್ಬಂದಿ ಗಾಂಜಾ ಕೇಸ್ನಲ್ಲಿ ಪ್ರಕರಣ ದಾಖಲಿಸುವುದಾಗಿ ವ್ಯಕ್ತಿಗೆ ಬೆದರಿಕೆ ಹಾಕಿ, ಅವರಿಂದ ಸುಮಾರು 3.40 ಲಕ್ಷ ಹಣ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದು ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಡಿಯಲ್ಲಿ ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಶಶಿಧರ್, ಸ್ವಾಮಿ, ಅರುಣ್ ಕುಮಾರ್, ನವೀನ್, ಅವರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಆಲ್ದೂರು ಪೊಲೀಸರು ಹೋಮ್ ಸ್ಟೇ ಮಾಲೀಕನನ್ನು ಬೆದರಿಸಿ ಲಂಚ ಪಡೆದಿದ್ದ ಆರೋಪದಡಿಯಲ್ಲಿ ಮೇಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.