ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ ನಡುವೆ ಜಿಲ್ಲೆಯಲ್ಲಿ ಕುರಿ ಮಾಂಸಕ್ಕೆ ತುಂಬಾ ಬೇಡಿಕೆ ಬಂದಿದೆ.
ಈ ನಡುವೆ ಹೆಚ್ಚಿನ ಹಣ ಮಾಡಲು ಕೆಲ ದಂಧೆಕೋರರು ಕುರಿ ಮಾಂಸಕ್ಕೆ ದನದ ಮಾಂಸ ಬೆರೆಸಿ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಸಿರಾಜ್, ಅನಿಲ್ ಡಿಮೆಲ್ಲೋ, ಡೆನಿಸ್ ಡಿಸೋಜ, ಡೆಂಜಿಲ್ ಬಂಧಿತ ಆರೋಪಿಗಳಾಗಿದ್ದಾರೆ.