ಚಿಕ್ಕಮಗಳೂರು:ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ನಿರಂತರವಾಗಿ ಎಡೆಬಿಡದೇ ಸುರಿದ ಧಾರಾಕಾರ ಮಳೆ ಮಲೆನಾಡು ಜನರ ಬದುಕನ್ನೇ ಸರ್ವನಾಶ ಮಾಡಿದೆ.
ದ್ರೋಣ್ನಲ್ಲಿ ಸೆರೆಯಾದ ಮಲೆನಾಡಿನ ಗುಡ್ಡಕುಸಿತದ ಚಿತ್ರಣ - ಮಧುಗುಂಡಿ ಚೆನ್ನಹಡ್ಲು
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಚ್ಚ ಹಸಿರಿನ ಹೊದಿಕೆ ಹೊಂದಿದ್ದ, ಭೂಮಿ ತಾಯಿ ಮುಖದಲ್ಲಿ ಮಹಾ ಮಳೆಯಿಂದಾಗಿ ಕುಸಿತ ಉಂಟಾಗಿ ಬಾರಿ ಅನಾಹುತಗಳು ಸಂಭವಿಸಿವೆ. ದ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದ ಈ ಭೀಕರತೆಯ ಫೋಟೊಗಳು ವೈರಲ್ ಆಗಿವೆ.
ಮಲೆನಾಡಿನ ಗುಡ್ಡಕುಸಿತದ ಚಿತ್ರಣ
ಹಚ್ಚ ಹಸಿರಿನ ಹೊದಿಕೆ ಹೊಂದಿದ್ದ ಭೂಮಿ ತಾಯಿ ಮುಖದಲ್ಲಿ ಮಹಾ ಮಳೆಯಿಂದಾಗಿ ಭೂ, ಗುಡ್ಡ ಕುಸಿತ ಉಂಟಾಗಿ ಕಪ್ಪು ಚುಕ್ಕೆಗಳು ಬಿದ್ದಂತೆ ಕಾಣಿಸುತ್ತಿದ್ದು, ಈ ಎಲ್ಲಾ ದೃಶ್ಯವನ್ನು ಡ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಮೂಡಿಗೆರೆ ತಾಲೂಕಿನ ಪ್ರಮುಖವಾಗಿ ಹಾನಿಗೊಳಗಾಗಿರುವ ಮಧುಗುಂಡಿ, ಚೆನ್ನಹಡ್ಲು, ಕಳಸ ಭಾಗದ ಕೆಲ ಪ್ರದೇಶದ ಚಿತ್ರಣವನ್ನು ಸೆರೆ ಹಿಡಿಯಲಾಗಿದ್ದು, ಭೂ ಕುಸಿತ ಹಾಗೂ ಗುಡ್ಡ ಕುಸಿತದಿಂದಾಗಿ ಯಾವ ರೀತಿಯಾಗಿ ಮಲೆನಾಡಿನ ಜನರ ಬದುಕು ಮೂರಾಬಟ್ಟೆಯಾಗಿದೆ ಎಂಬುದನ್ನು ಈ ಪೋಟೋಗಳು ತೋರಿಸುತ್ತಿವೆ.