ಕರ್ನಾಟಕ

karnataka

ETV Bharat / state

ಗುಡ್ಡ ಕುಸಿತದಿಂದ ಮನೆ ಸಮೇತ ಮುಚ್ಚಿಹೋಗಿದ್ದ ಸಂತೋಷ್​ ಶವ ಪತ್ತೆ

ಮೂಡಿಗೆರೆ ತಾಲೂಕಿನಲ್ಲಿ ಸುರಿಯುತ್ತಿರು ಭೀಕರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಕಳೆದ ವಾರ ಸಂತೋಷ್​ ಎಂಬಾತ ಗುಡ್ಡಕುಸಿತದಿಂದಾಗಿ ಸಾವನ್ನಪ್ಪಿದ್ದು, ನಿರಂತರ ಕಾರ್ಯಚರಣೆಯಿಂದಾಗಿ ಶವ ಪತ್ತೆಯಾಗಿದೆ.

ಸಂತೋಷ್​ ಶವ ಪತ್ತೆ

By

Published : Aug 14, 2019, 7:01 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಈ ಮಹಾಮಳೆ ಜನರ ಬದುಕನ್ನೇ ಸರ್ವ ನಾಶ ಮಾಡಿದ್ದು ಭೂಮಿ ಹಾಗೂ ತೋಟಗಳು ಹತ್ತಾರು ಹಳ್ಳಿಗಳಲ್ಲಿ ಕೊಚ್ಚಿಕೊಂಡು ಹೋಗಿದೆ. ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಸಂತೋಷ್ ಪೂಜಾರಿ ದೇಹ ಪತ್ತೆಯಾಗಿದೆ.

ಸಂತೋಷ್​ ಶವ ಪತ್ತೆ

ಮೂಡಿಗೆರೆಯ ಇಡಕಣಿ ಗ್ರಾಮದ ಪಕ್ಕದಲ್ಲಿರುವ ಚೆನ್ನಡ್ಲು ಗ್ರಾಮದಲ್ಲಿನ ಗುಡ್ಡ ಕುಸಿತದಿಂದ ಮನೆಯ ಸಹಿತ ಗ್ರಾಮದ ಯುವಕ ಸಂತೋಷ ಪೂಜಾರಿ ಗುಡ್ಡದ ಮಣ್ಣಿನಲ್ಲಿ ಕಳೆದ ಶನಿವಾರ ಮುಚ್ಚಿ ಹೋಗಿದ್ದ. ನಾಲ್ಕು ದಿನಗಳ ಕಾಲ ನಿರಂತರ ಕಾರ್ಯಚರಣೆ ಮಾಡಿದ್ದರೂ ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೇ ಅಧಿಕಾರಿಗಳು ಮತ್ತು ಸ್ಥಳೀಯರ ನಿರಂತರ ಕಾರ್ಯಚರಣೆ ಹಿನ್ನಲೆ ಸಂತೋಷ್ ಅವರ ಮೃತ ದೇಹ ಇಂದು ಪತ್ತೆಯಾಗಿದೆ.

ಸಂತೋಷ್​ ಕೆಸರಿನಲ್ಲಿ ಸಂಪೂರ್ಣ ಹೂತು ಹೋಗಿದ್ದು, ಸ್ಥಳೀಯರು ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಮೃತ ದೇಹವನ್ನು ಮೂಡಿಗೆರೆ ತಾಲೂಕು ಆಸ್ವತ್ರೆಗೆ ರವಾನಿಸಲಾಗಿದೆ.


ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರೆಗೂ ಮೂಡಿಗೆರೆ ತಾಲೂಕಿನಲ್ಲಿ 8 ಜನ, ಎನ್ ಆರ್ ಪುರ ತಾಲೂಕಿನಲ್ಲಿ 1, ಚಿಕ್ಕಮಗಳೂರಿನಲ್ಲಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 10 ಜನರು ಮಹಾ ಮಳೆಗೆ ಬಲಿಯಾಗಿದ್ದಾರೆ.

ABOUT THE AUTHOR

...view details