ಚಿಕ್ಕಮಗಳೂರು: ಆಗಸ್ಟ್ ಮೊದಲ ವಾರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಡೆಯಲಿರುವ ಭೂಮಿ ಪೂಜೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಿಂದ ದತ್ತಾತ್ರೇಯರ ಆಶೀರ್ವಾದದ ಮರಳನ್ನು ಕಳುಹಿಸಿ ಕೊಡಲಾಗಿದೆ.
ರಾಮಮಂದಿರ ಭೂಮಿಪೂಜೆಗೆ ದತ್ತಾತ್ರೇಯರ ಆಶೀರ್ವಾದದ ಮರಳು ರವಾನೆ - Ram Mandir Latest Breaking News
ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೂಜೆ ಮಾಡಿದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗೂರೂಜಿ ಅವರು ಭಿಕ್ಷೆ ಪಾತ್ರೆಗೆ ಮರಳು ಹಾಕಿ ಅಯೋಧ್ಯೆಗೆ ಕಳುಹಿಸಿಕೊಟ್ಟರು.
![ರಾಮಮಂದಿರ ಭೂಮಿಪೂಜೆಗೆ ದತ್ತಾತ್ರೇಯರ ಆಶೀರ್ವಾದದ ಮರಳು ರವಾನೆ Vinay Guruji is worshiping](https://etvbharatimages.akamaized.net/etvbharat/prod-images/768-512-8200691-623-8200691-1595917581773.jpg)
ಪೂಜೆ ಸಲ್ಲಿಸುತ್ತಿರುವ ವಿನಯ್ ಗುರೂಜಿ
ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೂಜೆ ಮಾಡಿದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗೂರೂಜಿ ಅವರು ಭಿಕ್ಷೆ ಪಾತ್ರೆಗೆ ಮರಳು ಹಾಕಿ ಕಳುಹಿಸಿಕೊಟ್ಟರು.
ಪೂಜೆ ಸಲ್ಲಿಸುತ್ತಿರುವ ವಿನಯ್ ಗುರೂಜಿ
ದೇಶದ 18 ದತ್ತ ಕ್ಷೇತ್ರದ ಮಣ್ಣು ತರುವಂತೆ ಪ್ರಧಾನಿ ಮೋದಿ ನೀಡಿದ ಸಂದೇಶ ಹಿನ್ನೆಲೆ ಬಜರಂಗದಳದ ಸುನೀಲ್.ಕೆ ಅವರ ಮೂಲಕ ವಿನಯ್ ಗುರೂಜಿ ಮರಳನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ. ಕಲಿಯುಗದ 19ನೇ ದತ್ತ ಕ್ಷೇತ್ರ ಗೌರಿಗದ್ದೆಯ ಸ್ವರ್ಣ ಪೀಠಿಕಪುರದಿಂದಲೂ ಮಣ್ಣು ಕೂಡ ರವಾನಿಸಲಾಗಿದೆ. ಇದೇ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭೂಮಿಪೂಜೆ ನಡೆಯಲಿದೆ.