ಚಿಕ್ಕಮಗಳೂರು : ಆರ್ಎಸ್ಎಸ್ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಆರ್ಎಸ್ಎಸ್ ದೇಶಕ್ಕಾಗಿ ಹೋರಾಟ ಮಾಡುವುದು, ದೇಶವನ್ನು ಉಳಿಸುವುದು ಇಂತಹ ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಪ್ರೇಮ ಇರುವವರನ್ನೇ ಹೊರ ಹಾಕಬೇಕು ಎಂದು ಯೋಚನೆ ಮಾಡುವುದು ಸರಿಯಲ್ಲ ಸಿದ್ದರಾಮಯ್ಯನವರೇ. ಪಿಎಫ್ಐ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಅವರು ದೇಶದ ಪರವಾಗಿಲ್ಲ.ದೇಶದ ಪರವಾಗಿ ಯೋಚನೆ ಮಾಡದವರನ್ನು ಹೊರ ಹಾಕುವುದು ದೇಶದ ಕರ್ತವ್ಯವೂ ಕೂಡ ಹೌದು. ಹಾಗಾಗಿ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.