ಕರ್ನಾಟಕ

karnataka

ETV Bharat / state

ಧರ್ಮೇಗೌಡ ಅವರ ಡೆತ್​ನೋಟ್ ಬಹಿರಂಗಪಡಿಸಿ: ಜೆಡಿಎಸ್ ರಾಜ್ಯಾಧ್ಯಕ್ಷ - ಧರ್ಮೇಗೌಡ ಡೆತ್ ನೋಟ್

ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದಾರೆ.

HK Kumaraswamy
ಹೆಚ್.ಕೆ ಕುಮಾರಸ್ವಾಮಿ

By

Published : Dec 29, 2020, 3:30 PM IST

Updated : Dec 29, 2020, 3:37 PM IST

ಚಿಕ್ಕಮಗಳೂರು:ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಡೆತ್​ನೋಟ್ ಬಹಿರಂಗಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

ಅವರ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅವರು ಸಾರ್ವಜನಿಕ ಜೀವನದಲ್ಲಿದ್ದವರು. ಅವರ ಡೆತ್​ನೋಟ್ ಬಹಿರಂಗಪಡಿಸಬೇಕು. ಪರಿಷತ್​ನಲ್ಲಿ ನಡೆದ ಗದ್ದಲ ವಿಚಾರ ಆತ್ಮಹತ್ಯೆಗೆ ಕಾರಣಾನಾ ಬಹಿರಂಗಪಡಿಸಿ. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ವ್ಯಕ್ತಿ ಅಲ್ಲ. ಅವರ ಸಾವಿಗೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯಬೇಕು ಎಂದರು.

ಅವರ ಆತ್ಮಹತ್ಯೆಯಿಂದ ರಾಜ್ಯಕ್ಕೆ, ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್​.ಕೆ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದರು.

Last Updated : Dec 29, 2020, 3:37 PM IST

ABOUT THE AUTHOR

...view details