ಕರ್ನಾಟಕ

karnataka

ETV Bharat / state

ಉರಗ ರಕ್ಷಣೆ ನೆಪದಲ್ಲಿ ವಿಷ ಸಂಗ್ರಹ.. 'ನಾಗರಾಜನಿಗೂ ಬೇಕಿದೆ ರಕ್ಷಣೆ' - ಡ್ರಗ್​​ಗೆ ಹಾವುಗಳ ವಿಷ ಬಳಕೆ ಸುದ್ದಿ

ನಗರ ಪ್ರವೇಶಿಸುವ ಹಾವುಗಳನ್ನು ರಕ್ಷಣೆ ನೆಪದಲ್ಲಿ ಕಾಳ ಸಂತೆಯಲ್ಲಿ ವಿಷ ಸಂಗ್ರಹಕ್ಕಾಗಿ ಬಳಸಿಕೊಳ್ಳುತ್ತಿರುವ ಸಂಗತಿಗಳು ಹೊರ ಬಿಳುತ್ತಿದ್ದು, ಹಾವುಗಳನ್ನು ರಕ್ಷಿಸುವವರು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾರಾ ಇಲ್ಲವಾ ಎಂಬ ವಿಚಾರವನ್ನು ಅರಣ್ಯ ಇಲಾಖೆ ತಿಳಿದುಕೊಳ್ಳಬೇಕಿದೆ..

rescued-snaked-using-for-takeout-poison
ಉರಗ ರಕ್ಷಣೆ

By

Published : Nov 2, 2020, 6:07 PM IST

ಚಿಕ್ಕಮಗಳೂರು :ನಗರ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ನೆಪದಲ್ಲಿ ವಿಷ ಸಂಗ್ರಹಣೆ ಮತ್ತು ಹಾವಾಡಿಗರು ಬಳಸಿಕೊಳ್ಳುವ ವಿಚಾರಗಳು ಬೆಳಕಿಗೆ ಬಂದಿವೆ.

ಹಾದಿ ತಪ್ಪಿ ಮನೆ, ಬೀದಿಗೆ ಬರುವ ಹಾವುಗಳನ್ನು ಕೆಲವರು ಹೊಡೆದು ಸಾಯಿಸಿದ್ರೆ ಇನ್ನು ಕೆಲವರು ಉರಗ ಪ್ರೇಮಿಗಳನ್ನು ಕರೆಸಿ ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ರಕ್ಷಣೆ ನೆಪದಲ್ಲಿ ವಿಷ ಸಂಗ್ರಹಕ್ಕಾಗಿ ರಕ್ಷಣೆ ಮಾಡಿದ ಹಾವುಗಳನ್ನು ಬಳಸಿಕೊಳ್ಳುವ ಸಂಗತಿಗಳು ಹೊರ ಬೀಳುತ್ತಿವೆ.

ಭಾರತದಲ್ಲಿ ವಿವಿಧ ಜಾತಿಯ ಹಾವುಗಳನ್ನು ನಾವು ಕಾಣುತ್ತೇವೆ, ಅದರಲ್ಲಿ ನಾಗರಹಾವು, ಕಾಳಿಂಗ ಸರ್ಪ, ಕಟ್ಟು ಹಾವು, ಮಂಡಲ ಹಾವು ಹೆಚ್ಚು ಅಪಾಯಕಾರಿ. ಇನ್ನು ಕೆರೆ ಹಾವು, ಹಸಿರು ಹಾವು, ನೀರು ಹಾವುಗಳು ವಿಷ ಪೂರಿತವಲ್ಲ. ಕೆಲವು ಹಾವುಗಳು ಕಚ್ಚಿದಾಗ ಸಣ್ಣ ಪುಟ್ಟ ತೊಂದರೆಯಾಗುತ್ತದೆ. ಆದ್ರೆ, ಪ್ರಾಣ ಹಾನಿಯಾಗೋದಿಲ್ಲ.

ಉರಗ ರಕ್ಷಣೆ ನೆಪದಲ್ಲಿ ವಿಷ ಸಂಗ್ರಹ

ಕೆಲ ಹಾವುಗಳು ರೈತರ ಮಿತ್ರನಾಗಿವೆ. ಎರಡು ತಲೆ ಹಾವು ಮನೆಯಲ್ಲಿ ಇಟ್ಟುಕೊಂಡರೇ ಮನೆಗೆ ಸಂಪತ್ತು ತುಂಬಿ ಹರಿಯುತ್ತದೆ ಎಂಬ ಮೌಢ್ಯತೆ ಕೆಲವರಲ್ಲಿದೆ. ಅದಕ್ಕಾಗಿ ಕೋಟಿ ಗಟ್ಟಲೆ ಹಣವನ್ನು ಕೊಟ್ಟು ಹಾವು ಪಡೆಯುವವರು ಇದ್ದಾರೆ. ಹಾವು ಪರಿಸರದಲ್ಲಿ ಹೆಚ್ಚಾಗಿ ಇದ್ದರೇ ಪರಿಸರ ಸುರಕ್ಷಿತವಾಗಿದ್ದಂತೆ. ಆದ್ರೆ, ಅದರ ವಿಷಕ್ಕಾಗಿ ಅದನ್ನ ಕೊಲ್ಲಬಾರದು ಎಂದು ಪರಿಸರ ತಜ್ಞ ಗಿರಿಜಾ ಶಂಕರ್ ತಿಳಿಸುತ್ತಾರೆ.

ನಾಗರಹಾವು ಹಾಗೂ ಕಾಳಿಂಗ ಸರ್ಪದ ವಿಷಕ್ಕೆ ಕಾಳ ಸಂತೆಯಲ್ಲಿ ತುಂಬಾ ಬೇಡಿಕೆ ಇದೆ. ಇದರ ವಿಷದಿಂದ ಔಷಧಿ ಹಾಗೂ ಡ್ರಗ್ಸ್ ತಯಾರು ಮಾಡಲಾಗುತ್ತದೆ. ಕೆಲ ಹಾವಾಡಿಗರು ಹಾವಿನ ಹಲ್ಲು ಕಿತ್ತು ಹಣಕ್ಕಾಗಿ ಆಟವಾಡಿಸುತ್ತಾರೆ. ಅದಕ್ಕಾಗಿ ಹಾವುಗಳನ್ನು ಹಿಡಿಯುವವರು ಅದನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಹೋಗಿ ಬಿಡುತ್ತಾರಾ ಇಲ್ಲವಾ ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಖಾತರಿ ಮಾಡಿಕೊಳ್ಳಬೇಕಿದೆ.

ABOUT THE AUTHOR

...view details