ಚಿಕ್ಕಮಗಳೂರು:ಹೊಸ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಒತ್ತಾಯ ಪೂರ್ವಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಾಭಿಪ್ರಾಯದ ಮೇಲೆ ಅದನ್ನು ಯೋಜನೆಗೆ ತರಬೇಕು. ಆಗ ಅದಕ್ಕೆ ಮಹತ್ವ ಸಿಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯ ತಿಳಿಸಿದರು.
ನಗರದಲ್ಲಿ ಹೊಸ ಜನಸಂಖ್ಯೆ ನಿಯಂತ್ರಣ ಕಾಯ್ದೆ ವಿಚಾರವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ಪಡೆದು ರೂಪಿಸಬೇಕು. ಜನಭಿಪ್ರಾಯ ಪರವಾಗಿದ್ರೆ, ರಾಜ್ಯಕ್ಕೆ ದೇಶಕ್ಕೆ ಒಳ್ಳೆಯದು. ಒತ್ತಾಯಪೂರ್ವಕವಾಗಿ ತರೋಕೆ ಇದು ತುರ್ತು ಪರಿಸ್ಥಿತಿ ಅಲ್ಲ. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ.
ಜನಾಭಿಪ್ರಾಯ ರೂಪಿಸಲಿ, ಪರ ಬಂದ್ರೆ ನಮ್ಮ ರಾಜ್ಯದಲ್ಲೂ ಕಾಯ್ದೆ ಜಾರಿಗೆ ತರಲಿ. ಈಗಾಗಲೇ ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ. ದೇಶದ ಜನಸಂಖ್ಯೆ 140 ಕೋಟಿಗೆ ಹೋಗಿದೆ. ಯುಪಿ ಅಸ್ಸೋಂನಲ್ಲಿ ಹೊಸ ಕಾಯ್ದೆ ತರುವ ಚರ್ಚೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ ಆಗಬೇಕು ಎಂದರು.
ಜನಾಭಿಪ್ರಾಯ ಪರದ ಇದ್ರೆ ಹೊಸ ಜನಸಂಖ್ಯಾ ನಿಯಂತ್ರಣ ಕಾಯ್ದೆ ರೂಪಿಸಲಿ ನಸ್ ಬಂದಿ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ಕಟ್ ಮಾಡ್ತಿದ್ರು
ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯವರು, ಇಂದಿರಾ ಬ್ರಿಗೇಡ್ ಹೆಸರಿನಲ್ಲಿ 'ನಸ್ ಬಂದಿ' ಕಾರ್ಯಕ್ರಮ ಮಾಡಿದ್ರು. ಒತ್ತಾಯಪೂರ್ವಕವಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಸುತ್ತಿದ್ರು. ಅವಾಗ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಲಿಲ್ಲ. ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿ ವಿರುದ್ಧ ಮಾತಾನಾಡುತ್ತಿದ್ರು. ಡಿಕೆಶಿ ಯೂತ್ ಕಾಂಗ್ರೆಸ್ನಲ್ಲಿದ್ರು.
ಅವರು ಎಷ್ಟು ನಸ್ ಬಂಧಿ ಮಾಡಿದ್ರು ಕೇಳಬೇಕು. ಆಗ ಯೂತ್ ಕಾಂಗ್ರೆಸ್ ನವರಿಗೆ ನಸ್ ಬಂಧಿ ಮಾಡಿದ್ರೆ ಪೋಷ್ಟಿಂಗ್ ಸಿಗ್ತಿತ್ತು. ನಾನು ಆ ರೀತಿಯಲ್ಲಿ ಒತ್ತಾಯ ಪೂರಕ ಹೇಳಿಕೆ ನೀಡ್ತಾ ಇಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚರ್ಚೆ ಆಗಲಿ ಅಂತಾ ಹೇಳ್ತಾ ಇದ್ದೀನಿ ಅಷ್ಟೇ ಎಂದರು.
ಅಧಿಕಾರವೇ ಇಲ್ಲದ ಪಾರ್ಟಿಯಿಂದ ಸಿಎಂ ಸ್ಥಾನಕ್ಕಾಗಿ ಪೈಪೋಟಿ
ಅಧಿಕಾರದಲ್ಲಿರುವ ಪಕ್ಷದಲ್ಲಿ ಮಂತ್ರಿಸ್ಥಾನದ ಪೈಪೋಟಿ ಸ್ವಾಭಾವಿಕ. ಇಲ್ಲವೆ ಸಿಎಂ ಸ್ಥಾನ ಖಾಲಿ ಇದ್ದಾಗ ಪೈಪೋಟಿ ಸಹಜ. ಆದರೆ ಕಾಂಗ್ರೆಸ್ಗೆ ಅಧಿಕಾರವೇ ಇಲ್ಲ. ಎಲ್ಲ ಚುನಾವಣೆಯಲ್ಲೂ ಸೋಲುತ್ತಾ ಬಂದಿದ್ದಾರೆ. ಆದರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ ಅಂದ್ರೆ ಏನ್ ಹೇಳಬೇಕು. ಇದಕ್ಕೆ ತಿರುಕನ ಕನಸು ಅಂತಾ ಕರೀಲಾ, ಅಥವಾ ಹೊಸ ಪದ ಹುಟ್ಟು ಹಾಕಬೇಕೋ ಗೊತ್ತಾಗ್ತಿಲ್ಲ ಎಂದು ಹೇಳಿದರು.
ಬೇರೆ ಬೇರೆ ರಾಜ್ಯದಲ್ಲೂ ಕಾಂಗ್ರೆಸ್ಗೆ ವಿಶ್ವಾಸ ಬರುವ ರೀತಿಯಲ್ಲಿ ಫಲಿತಾಂಶ ಬಂದಿಲ್ಲ. ಪಶ್ಚಿಮ ಬಂಗಾಳದಲ್ಲಿ ಶೂನ್ಯ ಸಂಪಾದನೆ ಪಡೆದಿದೆ. ಜಿಲ್ಲಾ ಪಂಚಾಯತ್ ಹಾಗೂ ಕಾರ್ಪೋರೇಷನ್ ಚುನಾವಣೆಯಲ್ಲೂ ಕಾಂಗ್ರೆಸ್ ಸಂಪಾದನೆ ಶೂನ್ಯ. ಯಾವ ಜಿಲ್ಲಾಪಂಚಾಯಿತಿಯಲ್ಲಿ ಅಧಿಕಾರಕ್ಕೆ ಇಳಿದಿಲ್ಲ. ಸಾಂಪ್ರದಾಯಿಕ ಎಂದುಕೊಳ್ಳುವ ರಾಜ್ಯದಲ್ಲೇ ಕಾಂಗ್ರೆಸ್ ಕಾಣೆಯಾಗಿದೆ.
ಸೋತರು ಅವರ ಉತ್ಸಾಹವನ್ನ ಮೆಚ್ಚಲೇಬೇಕು. ಇನ್ನಷ್ಟು ಜನ ಕಾಂಗ್ರೆಸ್ ನಿಂದ ವಲಸೆ ಹೋಗದೆ ಇರಲಿ ಅಂತಾ ಹೀಗೆ ರಾಜಕೀಯ ಮಾಡ್ತಾ ಇರಬಹುದು. ಇಲ್ಲದೇ ಇದ್ರೆ ಇಷ್ಟು ಕಚ್ಚಾಟ ಮಾಡ್ತಾ ಇದ್ರಾ ಎಂದು ಹಾಸ್ಯ ಮಾಡಿದ್ರು.