ಚಿಕ್ಕಮಗಳೂರು :ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತೆಯ ತಾಯಿಯೇ ಇಲ್ಲಿ ವಿಲನ್ ಆಗಿದ್ದಾಳೆಂಬ ಆರೋಪ ಕೇಳಿ ಬಂದಿದೆ. ತನಿಖೆಗೂ ಮೊದಲು ಬಾಲಕಿಯ ಚಿಕ್ಕಮ್ಮ ಎಂದು ಮಹಿಳೆ ಹೇಳಿಕೊಂಡಿದ್ದಳಂತೆ.
ಆದರೆ, ತನಿಖೆಯಲ್ಲಿ ಮಾತ್ರ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ಅಲ್ಲ ಹೆತ್ತ ತಾಯಿ ಅನ್ನೋದು ಸಾಬೀತು ಆಗಿದೆ. ಉತ್ತರಕರ್ನಾಟಕದ ಮಹಿಳೆ ಶೃಂಗೇರಿಗೆ ಬಂದು ಮತ್ತೊಬ್ಬನ ಜೊತೆ ವಿವಾಹವಾಗಿದ್ದಳು. ಶೃಂಗೇರಿಯಲ್ಲಿ ಈ ಬಾಲಕಿ ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡಿದ್ದಳು. ಕೆಲ ವರ್ಷಗಳ ನಂತರ 2ನೇ ಗಂಡನಿಂದಲೂ ಈ ಮಹಿಳೆ ದೂರವಾಗಿದ್ದಳು.