ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ಕೋವಿಡ್-19 ವೈರಸ್ ತಡೆಗಟ್ಟುವ ವಿಚಾರವಾಗಿ ಸಭೆ ನಡೆಯಿತು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆ ಗ್ರೀನ್ ಝೋನ್ನಲ್ಲಿದೆ. ರಾಜ್ಯದಲ್ಲಿ 589 ಜನರು ಪಾಸಿಟಿವ್ ಕೇಸ್ ಇದ್ದು, 235 ಗುಣಮುಖರಾಗಿದ್ದಾರೆ, 23 ಜನರು ಸಾವನ್ನಪ್ಪಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯ ಉತ್ತಮವಾಗಿದೆ ಎಂದಿದ್ದಾರೆ.
ಸರ್ಕಾರ ನೀಡಿರುವ ಸಲಹೆ ಸೂಚನೆ ಪಾಲಿಸಿಕೊಂಡು ಬರಬೇಕಿದೆ. ಯಾರು ಮಾಸ್ಕ್ ಹಾಕುವುದಿಲ್ಲವೋ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲ್ಲ ಆ ಸಂದರ್ಭದಲ್ಲಿ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ. ಈ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದರು.
ಇದಲ್ಲದೇ ಮುಂಬೈನಲ್ಲಿ 23ಕ್ಕೆ ಒಬ್ಬ ವ್ಯಕ್ತಿ ಹೃದಯಾಘಾತದಿಂದ ಸಾವನಪ್ಪಿದ್ದರು. ನಂತರ ಆ್ಯಂಬುಲೆನ್ಸ್ನ ಮೂಲಕ ಮಂಡ್ಯದ ಪಾಂಡವಪುರಕ್ಕೆ ತರಲಾಗಿದೆ. ಆ್ಯಂಬುಲೆನ್ಸ್ನಲ್ಲಿ ಅವರ ಹೆಂಡತಿ, ಮಕ್ಕಳು, ಮಗ, ಮೊಮ್ಮಕ್ಕಳು ಇದ್ದರು. ಈ ಪ್ರಕರಣದಲ್ಲಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಪಾಸಿಟಿವ್ ಬಂದಿದೆ. ಈಗಾಗಲೇ ಅವರಿಗೆ ಚಿಕಿತ್ಸೆ ಸಹ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.