ಚಿಕ್ಕಮಗಳೂರು:ವಿಶ್ವದೆಲ್ಲೆಡೆ ಕೊರೊನಾ ವೈರಸ್ಗೆ ಜನ ಬಲಿಯಾಗುತ್ತಿರುವುದಕ್ಕೆ ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪೀಠದ ಜಗದ್ಗುರು ರಂಭಾಪುರಿ ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಕೊರೊನಾಗೆ ಜನರ ಬಲಿ: ರಂಭಾಪುರಿ ಶ್ರೀ ವಿಷಾದ - ರಂಭಾಪುರಿ ಶ್ರೀಗಳು ಲೆಟೆಸ್ಟ್ ನ್ಯೂಸ್
ಕೊರೊನಾ ಸೋಂಕಿಗೆ ಸಾರ್ವಜನಿಕರು ಬಲಿಯಾಗುತ್ತಿರುವ ಬಗ್ಗೆ ಬಾಳೆಹೊನ್ನೂರು ಪೀಠದ ಜಗದ್ಗುರು ರಂಭಾಪುರ ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಮಾಡಿರುವಂತಹ ಪದಾರ್ಥಗಳನ್ನು ಮುಚ್ಚಿಡುವಂತಹ, ಸುರಕ್ಷಿತ ಕಾಪಾಡುವ ಕೆಲಸ ಅಗತ್ಯ ಇದೆ. ಯಾವ ಪದಾರ್ಥ ಬಳಸಬೇಕು, ಬಳಸಬಾರದು ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರೋಗದ ನಿಯಂತ್ರಣಕ್ಕೆ ವೈದ್ಯಕೀಯ ಕ್ಷೇತ್ರ ಈಗಾಗಲೇ ಚುರುಕಾಗಿ ಕೆಲಸ ಮಾಡುತ್ತಿದೆ. ಆರೋಗ್ಯ ಘಟಕಗಳು ಸ್ಥಾಪಿಸಿ ವೈದ್ಯರು ಮುನ್ನೆಚ್ಚರಿಕೆ ಕ್ರಮ ಜರುಗಿಸುತ್ತಿದ್ದಾರೆ. ಜಾಗೃತಿ ಮೂಡಿಸುವಂತಹ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕಿದೆ. ಈಗಾಗಲೇ ವೈದ್ಯಧಿಕಾರಿಗಳು ರೋಗವನ್ನು ನಿಯಂತ್ರಣಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.