ಕರ್ನಾಟಕ

karnataka

ETV Bharat / state

ಸಾಹಿತಿ ಚಿದಾನಂದ ಮೂರ್ತಿ ನಿಧನಕ್ಕೆ ರಂಭಾಪುರಿ ಜಗದ್ಗುರು ಶ್ರೀ ಸಂತಾಪ - ಸಾಹಿತಿ ಡಾ. ಎಂ ಚಿದಾನಂದ ಮೂರ್ತಿ ನಿಧನಕ್ಕೆ ಶ್ರೀ ಸಂತಾಪ

ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ನಿಧನಕ್ಕೆ ಬಾಳೆಹೊನ್ನೂರು ಪೀಠದ ಶ್ರೀ ರಂಭಾಪುರಿ ಜಗದ್ಗುರುಗಳು ಸಂತಾಪ ಸೂಸಿಚಿದ್ದಾರೆ.

ಚಿದಾನಂದ ಮೂರ್ತಿ ಅಗಲಿಕೆ ಸಂತಾಪ ಸೂಚಿಸಿದ ಶ್ರೀ ರಂಭಾಪುರಿ ಜಗದ್ಗುರು
Rambhapuri Shree regrets the death of Chidananda Murthy death at Chikmagalur

By

Published : Jan 11, 2020, 5:49 PM IST

ಚಿಕ್ಕಮಗಳೂರು :ಹೆಸರಾಂತ ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ ಅವರ ಅಗಲಿಕೆಗೆ ಬಾಳೆಹೊನ್ನೂರು ಪೀಠದ ಶ್ರೀ ರಂಭಾಪುರಿ ಜಗದ್ಗುರುಗಳು ಸಂತಾಪ ಸೂಚಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಹೆಸರು ಮಾಡಿದ್ದ ಡಾ. ಎಂ ಚಿದಾನಂದ ಮೂರ್ತಿ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೈದ ವ್ಯಕ್ತಿಯಾಗಿದ್ದರು. ಕನ್ನಡ ಉಳಿವಿಗಾಗಿ ಅವರು ಮಾಡಿದ ಹೋರಾಟವನ್ನು ಯಾರೂ ಮರೆಯುವಂತಿಲ್ಲ ಎಂದು ಕೊಂಡಾಡಿದ್ದಾರೆ.

ರಂಭಾಪುರಿ ಶ್ರೀ ಹೊರಡಿಸಿರುವ ಪತ್ರಿಕಾ ಪ್ರಕಟಣೆ

ವೀರಶೈವ, ಲಿಂಗಾಯಿತ ಎರಡೂ ಒಂದೆ. ಇವುಗಳನ್ನು ಹಿಂದೂ ಸಂಸ್ಕೃತಿಯಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅವರ ಗಟ್ಟಿ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 88 ನೇ ವಯಸ್ಸಿನಲ್ಲಿಯೂ ಅವರ ಕಾರ್ಯಚಟುವಟಿಕೆ ನಿರಂತರವಾಗಿತ್ತು. ಆದರೆ ಅವರ ಅಗಲಿಕೆ ಅತ್ಯಂತ ನೋವುಂಟು ಮಾಡಿದ್ದು, ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details