ಪ್ರಧಾನಿ ಮೋದಿಗೆ ಭರ್ಜರಿ ಉಡುಗೊರೆ ನೀಡಿದ ಚಿಕ್ಕಮಗಳೂರಿನ ಅಂಧ ಕ್ರೀಡಾಪಟು ಚಿಕ್ಕಮಗಳೂರು :ಏಷ್ಯನ್ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ ಕಾಫಿನಾಡಿನ ಅಂಧ ಯುವತಿ ರಕ್ಷಿತಾ ರಾಜು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಿದ್ದಾರೆ. ಅಂಧ ಯುವತಿಯಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ ಅವರು ಖುಷಿ ಪಟ್ಟು ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆಲ್ಲುವಂತೆ ಹಾರೈಸಿದ್ದಾರೆ.
ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಸಮೀಪದ ಅಂಧ ಯುವತಿ ರಕ್ಷಿತಾ ರಾಜು ಅವರು, ಕಳೆದ ತಿಂಗಳು ಚೀನಾದ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ 1500 ಮೀಟರ್ ಓಟವನ್ನ 5.21 ಸೆಕೆಂಡ್ಗೆ ಓಡುವ ಮೂಲಕ ಚಿನ್ನದ ಸಾಧನೆ ಮಾಡಿದ್ದರು.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ 5ನೇ ಸ್ಥಾನವನ್ನು ರಕ್ಷಿತಾ ಪಡೆದುಕೊಂಡಿದ್ದರು. ದೆಹಲಿಯಲ್ಲಿ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ರಕ್ಷಿತಾ ರಾಜು ಪ್ರಧಾನಿ ಮೋದಿಗೆ ಮಹತ್ವದ ಉಡುಗೊರೆಯನ್ನು ನೀಡಿದ್ದಾರೆ.
ಪ್ರಧಾನಿ ಮೋದಿಗೆ ಭರ್ಜರಿ ಉಡುಗೊರೆ ರಕ್ಷಿತಾ ರಾಜು ಅವರು ಪ್ರಧಾನಿಗೆ 5.500 ಮೌಲ್ಯದ ಗಿಫ್ಟ್ ಕೊಟ್ಟಿದ್ದಾರೆ. ತನ್ನ ಓಟದ ಪಾರ್ಟ್ನರ್ ಟಿಟ್ಟರ್ ಅನ್ನ ಮೋದಿಗೆ ಯುವತಿ ನೀಡಿದ್ದಾರೆ. ಎರಡು ಚಿನ್ನದ ಮೆಡಲ್ ಗೆದ್ದ ಟಿಟ್ಟರ್ನ ಮೋದಿಗೆ ನೀಡಿದ ಅಂಧ ಓಟಗಾರ್ತಿಯಾಗಿದ್ದಾರೆ. ಗೈಡ್ ಜೊತೆ ಸಮಯೋಚಿತವಾಗಿ ಓಡಲು ಟಿಟ್ಟರ್ ಸಹಾಯ ಮಾಡುತ್ತೆ.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ ಕ್ರೀಡಾಪಟುಗಳು ರಕ್ಷಿತಾ ರಾಜು ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ?:ಈ ಬಗ್ಗೆ ಮಾತನಾಡಿದ ಕ್ರೀಡಾಪಟು ರಕ್ಷಿತಾ ರಾಜು, 'ನಿನ್ನೆ ನನಗೆ ಮೋದಿ ಅವರನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯಿತು. ಇನ್ನೊಂದು ಖುಷಿ ವಿಷಯವೆಂದರೆ ನಾನವರಿಗೆ ಗಿಫ್ಟ್ ಮಾಡಿದೆ. ಅವರು ನಾನು ಕೊಟ್ಟ ಗಿಫ್ಟ್ ಅನ್ನು ಕೈಯಿಂದ ತೆಗೆದುಕೊಂಡು ಇದೇನು ಅಂತ ಕೇಳಿದ್ರು. ನಾನು ಅವರಿಗೆ ಅದರ ಬಗ್ಗೆ ವಿವರಿಸಿದೆ. ನಾನು ಅವರಿಗೆ ಗಿಫ್ಟ್ ಮಾಡಿದ್ದು ಟೆಟ್ಟರ್. ಅದು ನನ್ನ ಟ್ರೈನಿಂಗ್ ಪಾರ್ಟ್ನರ್. ಅದು ನನಗೆ ಎಷ್ಟು ಇಂಪಾರ್ಟೆಂಟ್, ಅದು ನನಗೆ ಹೇಗೆಲ್ಲಾ ಅವಶ್ಯಕತೆ ಇದೆ. ಹೇಗೆಲ್ಲಾ ಹೆಲ್ಪ್ ಆಗುತ್ತೆ ಅನ್ನೊದನ್ನು ಅವರಿಗೆ ಹೇಳಿದೆ. ನಾನು ಅದೇ ಉಡುಗೊರೆ ನೀಡಲು ಆಯ್ಕೆ ಮಾಡಿ ಕೊಡುವುದಕ್ಕೂ ಒಂದು ಕಾರಣ ಇತ್ತು. 2018 ರಲ್ಲಿಯೂ ನಾನು ಪ್ಯಾರಾ ಒಲಂಪಿಕ್ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದೆ. 2022ರ ಏಷ್ಯನ್ ಗೇಮ್ನಲ್ಲಿಯೂ ಗೋಲ್ಡ್ ಮೆಡಲ್ ಪಡೆದಿದ್ದೇನೆ. ನಾನು ಮೋದಿ ಅವರಿಗೆ ಟಿಟ್ಟರ್ ಕೊಟ್ಟಾಗ, ಅದನ್ನು ಪಡೆದ ಅವರು, ಮುಂದಿನ ಪ್ಯಾರಾ ಒಲಿಂಪಿಕ್ನಲ್ಲಿಯೂ ಇದೇ ಸಾಧನೆ ಮಾಡುವಂತೆ ಹಾರೈಸಿದರು. ಇದು ನನಗೆ ತುಂಬಾ ಖುಷಿಯಾಯಿತು' ಎಂದರು.
ಇದನ್ನೂ ಓದಿ :ಏಷ್ಯನ್ ಪ್ಯಾರಾ ಗೇಮ್ಸ್: ಚಿನ್ನ ಗೆದ್ದ ಚಿಕ್ಕಮಗಳೂರಿನ ವಿಶೇಷಚೇತನ ಪ್ರತಿಭೆ ರಕ್ಷಿತಾ ರಾಜು