ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಮತ್ತೆ ಮಳೆ... ಚಿಕ್ಕಮಗಳೂರು ಜನತೆಗೆ ಗಾಯದ ಮೇಲೆ ಬರೆ - kannadanews

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮತ್ತೆ ಮಳೆಯಾಗುತ್ತಿದ್ದು, ಜನರನ್ನು ಕಂಗೆಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮತ್ತೆ ಮಳೆ

By

Published : Aug 21, 2019, 10:36 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮತ್ತೆ ಮಳೆ ಆರಂಭವಾಗಿದೆ.

ಇಂದು ಸಂಜೆಯಿಂದ ನಿರಂತರವಾಗಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮತ್ತೆ ಮಳೆಯಾಗುತ್ತಿರೋದು ಮಲೆನಾಡಿನ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹತ್ತಾರು ಪ್ರದೇಶಗಳಲ್ಲಿ ಕುಸಿದು ಬಿದ್ದ ಗುಡ್ಡದ ಮಣ್ಣು ತೆರೆವುಗೊಳಿಸುವ ಕಾರ್ಯವೇ ಸರಿಯಾಗಿ ಮುಗಿದಿಲ್ಲ. ಇದರ ಮಧ್ಯೆ ಮತ್ತೆ ಮಳೆ ಸುರಿಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮತ್ತೆ ಮಳೆ

ಈಗ ಮಳೆಯಾಗುತ್ತಿರುವ ಕಾರಣ ಮಣ್ಣು ತೆರವು ಕಾರ್ಯಚರಣೆಗೂ ಅಡ್ಡಿ ಉಂಟು ಮಾಡುತ್ತಿದೆ. ಆಗಿರೋ ಅನಾಹುತಗಳಿಂದ ನೂರಾರು ಜನ ನಿರಾಶ್ರಿತರ ಕೇಂದ್ರದಲ್ಲೇ ಉಳಿದುಕೊಂಡಿದ್ದಾರೆ.

ABOUT THE AUTHOR

...view details