ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆ ಸಂಜೆ ಅಲ್ಲಲ್ಲಿ ಆಲಿಕಲ್ಲು ಮಿಶ್ರಿತ ಮಳೆ ಸುರಿದಿದೆ. ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗಿದೆ.
ಬಾಳೆಹೊನ್ನೂರು, ಕೊಪ್ಪ, ಜಯಪುರ, ಕೊಟ್ಟಿಗೆಹಾರ, ಬಣಕಲ್ ಈ ಭಾಗದಲ್ಲಿ ನಿರಂತರ ಮಳೆ ಸುರಿದಿದೆ. ವಿಶೇಷವಾಗಿ ಬಾಳೆಹೊನ್ನೂರಿನ ಸಂಗಮೇಶ್ವರ ಪೇಟೆಯಲ್ಲಿ ಗುಡುಗು-ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಇದನ್ನೂ ಓದಿ:ಹೆಚ್ಡಿಕೆ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿಗೂ ತಗುಲಿದ ಕೊರೊನಾ
ಲಕ್ಷಾಂತರ ಪ್ರಮಾಣದಲ್ಲಿ ಆಲಿಕಲ್ಲು ನೆಲಕ್ಕೆ ಬಿದ್ದಿದೆ. ಮೂಡಿಗೆರೆ, ಕೊಪ್ಪ, ಎನ್‌ಆರ್‌ಪುರ ಭಾಗದಲ್ಲೂ ವರುಣನ ಅಬ್ಬರವಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರು ದಿನಗಳಿಂದ ಸುರಿದ ಈ ಮಳೆಗೆ ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.
ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನರಿಗೆ ತಂಪಿನ ವಾತಾವರಣ ಸಿಕ್ಕಂತಾಗಿದೆ. ನಿನ್ನೆ ಸಂಜೆ ಮಳೆಯಿಂದ ಮಲೆನಾಡಿನ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡು ಬಂದಿದೆ.