ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಅಕಾಲಿಕ ಮಳೆಗೆ ಕಾಫಿ ಬೆಳೆಗಾರರು ತತ್ತರ - ಮೂಡಿಗೆರೆ

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆಗೆ ಕೊಚ್ಚಿ ಹೋಗಿದ್ದ ಕಾಫಿ ಬೀಜವನ್ನು ಕಾಫಿ ಬೆಳೆಗಾರರು ಆರಿಸಿಕೊಳ್ಳುತ್ತಿದ್ದಾರೆ.

Coffee growers
ಕಾಫಿ ಬೆಳೆಗಾರರು

By

Published : Feb 22, 2021, 5:10 PM IST

ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಧಾರಾಕಾರ ಅಕಾಲಿಕ ಮಳೆಗೆ, ಕಾಫಿ ಬೆಳೆಗಾರರು ಅತಂತ್ರರಾಗಿದ್ದಾರೆ.

ರಸ್ತೆಯಲ್ಲಿ ಬಿದ್ದಿರುವ ಕಾಫಿಯನ್ನು ಬಾಚಿಕೊಳ್ಳುತ್ತಿರುವ ಜನರು

ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಯಿಂದ ಕಣದಲ್ಲಿದ್ದ ಕಾಫಿ ಬೀಜಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೊಚ್ಚಿ ಹೋಗಿರೋ ಕಾಫಿಯನ್ನ ಬೆಳೆಗಾರರು ರಸ್ತೆ ಹಾಗೂ ಚರಂಡಿಯಲ್ಲಿ ಕುಳಿತು ಬಾಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕಾಲಿಕ ಮಳೆಯಿಂದ ಕೊಚ್ಚಿ ಹೋಗಿದ್ದ ಕಾಫಿಯನ್ನು, ರೈತರು ಹಾಗೂ ಜನರು ಆರಿಸಿಕೊಳ್ಳುತ್ತಿದ್ದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಮಳೆ ಅವಾಂತರದಿಂದ ಈ ಘಟನೆ ಸೃಷ್ಟಿಯಾಗಿದೆ.

ABOUT THE AUTHOR

...view details