ಚಿಕ್ಕಮಗಳೂರು:ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ವಾಹನಗಳು ರಸ್ತೆಗಳಲ್ಲಿ ಓಡಾಡುವುದಕ್ಕೆ ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಮಲೆನಾಡಿನಲ್ಲಿ ಮಳೆಯ ಅವಾಂತರ: ಮಾರ್ಗಮಧ್ಯೆ ಪ್ರಯಾಣಿಕರ ಪರದಾಟ - ಮಳೆಯ ಪ್ರಮಾಣ
ಮಳೆನಾಡಿನಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು, ಜನಸಾಮಾನ್ಯರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಲು ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನಲ್ಲಿ ಮಳೆಯ ಅವಾಂತರ
ಮಲೆನಾಡಿನಲ್ಲಿ ಮಳೆಯ ಅವಾಂತರ
ಹೌದು, ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ವೊಂದು ಕೈಮರ-ಹೊಸಪೇಟೆ ಮಾರ್ಗಮಧ್ಯೆ ಮಣ್ಣಿನ ರಸ್ತೆಯಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಹೊಸಪೇಟೆ ಸಮೀಪ ಪ್ರಯಾಣಿಕರನ್ನು ಹತ್ತಿಸಿಕೊಂಡ ಖಾಸಗಿ ಬಸ್ ಮಣ್ಣಿನ ರಸ್ತೆಯಲ್ಲಿ ಸಿಲುಕಿ ಮುಂದಕ್ಕೂ ಹೋಗದೆ ಹಿಂದಕ್ಕೂ ಬರಲಾಗದೆ ರಸ್ತೆಯಲ್ಲಿ ಚಕ್ರಗಳು ಗಿರಕಿ ಹೊಡೆದವು. ಎಷ್ಟೇ ಪ್ರಯತ್ನ ಪಟ್ಟರೂ ಮುಂದಕ್ಕೆ ಹೋಗಲು ಸಾಧ್ಯವಾಗಿಲ್ಲ. ನಂತರ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನೂ ಕೆಳಗೆ ಇಳಿಸಿ ಅವರಿಂದಲೇ ಬಸ್ ತಳ್ಳಿಸುವುದರ ಮೂಲಕ ಮುಖ್ಯ ರಸ್ತೆಗೆ ಬಸ್ ತಂದಿದ್ದಾರೆ.