ಚಿಕ್ಕಮಗಳೂರು: ಶೃಂಗೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ವೇಳೆ ಶಾಸಕ ಟಿ. ಡಿ ರಾಜೇಗೌಡ ತಾಲೂಕು ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಶಾಸಕ ರಾಜೇಗೌಡ, ಗ್ರಾಮ ಠಾಣ ಜಾಗ (ಗೋಮಾಳ )ವನ್ನುಅನಧಿಕೃತವಾಗಿ ಒತ್ತುವರಿ ಮಾಡಿದರೆ ಅಂತವರನ್ನು ಕೂಡಲೇ ಆ ಜಾಗದಿಂದ ಬಿಡಿಸಬೇಕು. ನಿಮ್ಮ ಜಾಗ ನೀವು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಗರಂ ನಿಮ್ಮ ಜಾಗ ನಿಮ್ಮ ಕೈಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲವಾ?. ಯಾರೋ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ನಾನು ಸುಮ್ಮನೆ ಬಂದು ಸಭೆ ಮಾಡಿ ಹೋಗಲು ಬಂದಿಲ್ಲ. ನಿಮಗೆ ಕೆಲಸ ಮಾಡಲು ಯಾವುದಾದರೂ ಭಯವಿದೆಯಾ?, ಗ್ರಾಮ ಠಾಣಾ ಜಾಗವನ್ನು ಎಷ್ಟೇ ಪ್ರಭಾವಿಗಳು ಒತ್ತುವರಿ ಮಾಡಿದರು. ಅವರಿಂದ ಅದನ್ನು ಬಿಡಿಸಿ. ಮೂರು ತಿಂಗಳಿಂದ ಸಭೆ ಮಾಡಿಕೊಂಡು ಸುಮ್ಮನೆ ಕೂರಲು ನಾನು ಇಲ್ಲಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಭೆಯಲ್ಲಿ ಹೇಳಿದ ಯಾವುದೇ ಅಭಿವೃದ್ಧಿ ಅಂಶಗಳು ಕಂಡು ಬಂದಿಲ್ಲ. ಸುಮ್ಮನೆ ಸಭೆ ಏಕೆ ಕರೆಯುತ್ತೀರಿ?. ನನಗೆ ಮಾಡಲು ತುಂಬಾ ಕೆಲಸವಿದೆ. ಮುಂದೆ ಏನು ಮಾಡುತ್ತೀರಾ? ಎಂದು ಅಧಿಕಾರಿಗಳ ವಿರುದ್ಧ ಶಾಸಕ ಟಿ.ಡಿ ರಾಜೇಗೌಡ ಕಿಡಿಕಾರಿದರು.