ಕರ್ನಾಟಕ

karnataka

ETV Bharat / state

ಮಾಸ್ಕ್ ಇಲ್ಲ, ಸ್ಯಾನಿಟೈಸರ್​​ ಇಲ್ಲ, ಮಾತ್ರೆ ಕೂಡ ಇಲ್ಲ.. ಅಧಿಕಾರಿಗಳ ವಿರುದ್ಧ ಕ್ವಾರಂಟೈನಿಗಳ ಆರೋಪ!! - ಕ್ವಾರಂಟೈನ್​ ಅವ್ಯವಸ್ಥೆ

ಸುಮಾರು 55 ಜನರನ್ನು ಜಿಲ್ಲಾ ಆರೋಗ್ಯ ಇಲಾಖೆ ಕಡೂರಿನ ಕಾಮನ ಕೆರೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ.

ಕ್ವಾರಂಟೈನಿಗಳ ಆರೋಪ
ಕ್ವಾರಂಟೈನಿಗಳ ಆರೋಪ

By

Published : Jun 12, 2020, 8:21 PM IST

ಚಿಕ್ಕಮಗಳೂರು :ಜಿಲ್ಲಾ ಆರೋಗ್ಯ ಇಲಾಖೆ ಸ್ಯಾನಿಟೈಸರ್ ನೀಡಿಲ್ಲ. ಮಾಸ್ಕ್ ಕೊಟ್ಟಿಲ್ಲ, ಕುಡಿಯಲು ಫ್ಲೋರೈಡ್‌ಯುಕ್ತ ಕೊಳಕು ನೀರನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಕಡೂರಿನ ಕಾಮನ ಕೆರೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಆದವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಡೂರು ತಾಲೂಕಿನ ಕೆ.ದಾಸರಹಳ್ಳಿ ಗ್ರಾಮದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ ಆತನ ಸಂಪರ್ಕದಲ್ಲಿದ್ದ ಸುಮಾರು 55 ಜನರನ್ನು ಜಿಲ್ಲಾ ಆರೋಗ್ಯ ಇಲಾಖೆ ಕಡೂರಿನ ಕಾಮನ ಕೆರೆಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಆದರೆ, ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ವಿರುದ್ದ ಕ್ವಾರಂಟೈನಿಗಳ ಆಕ್ರೋಶ..

ತಮಗೆ ಶೌಚಾಲಯಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ಮಾತ್ರೆ ಕೂಡ ಸಿಗುತ್ತಿಲ್ಲ ಎಂದು ಕ್ವಾರಂಟೈನ್‌ನಲ್ಲಿರುವವರು ಆರೋಪಿಸಿದ್ದಾರೆ.

ABOUT THE AUTHOR

...view details