ಚಿಕ್ಕಮಗಳೂರು:ಮೇಕೆ ಮರಿ ನುಂಗಿ ಬೆಚ್ಚಗೆ ಶೆಡ್ನಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ನಗರದ ಕಾಫಿ ಮಂಡಳಿಯ ಸಮೀಪ ವೆಂಕಟಪ್ಪ ಎಂಬುವವರಿಗೆ ಸೇರಿದ ಕುರಿ ಶೆಡ್ಗೆ ಸುಮಾರು 14 ಅಡಿ ಉದ್ದದ ಹೆಬ್ಬಾವು ಬಂದು ಮೇಕೆ ಮರಿಯನ್ನು ನುಂಗಿತ್ತು.
ಇದನ್ನು ಗಮನಿಸಿದ ಮಾಲೀಕ ವೆಂಕಟಪ್ಪ ಮೇಕೆ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಿದ್ದಾರೆ. ಆದರೆ, ಹೆಬ್ಬಾವು ಮಾತ್ರ ಮೇಕೆ ಮರಿ ನುಂಗುವುದನ್ನು ಬಿಡಲಿಲ್ಲ. ಸಂಪೂರ್ಣವಾಗಿ ನುಂಗಿ ನಂತರದಲ್ಲಿ ಬೆಚ್ಚಗೆ ಶೆಡ್ನಲ್ಲಿಯೇ ಮಲಗಿತು. ಕೂಡಲೇ ಸ್ಥಳೀಯರ ಸಹಕಾರದಿಂದ ಉರಗ ತಜ್ಞ ನರೇಶ್ ಅವರನ್ನು ಸ್ಥಳಕ್ಕೆ ಕರೆಸಲಾಗಿದೆ.