ಚಿಕ್ಕಮಗಳೂರು :ನಟ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಅವರ ಪತ್ನಿ ಅಶ್ವಿನಿಯವರ ಹುಟ್ಟೂರಾದ ಮಲ್ಲಂದೂರು ಸಮೀಪದ ಭಾಗಮನೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಭಾಗಮನೆ ಗ್ರಾಮದ ರೇವನಾಥ್ ಮತ್ತು ವಿಜಯ ದಂಪತಿ ಪುತ್ರಿ ಅಶ್ವಿನಿ. ಆಗಾಗ ಭಾಗಮನೆ ಗ್ರಾಮಕ್ಕೆ ಪುನೀತ್ ರಾಜಕುಮಾರ್ ಆಗಮಿಸುತ್ತಿದ್ದರು. ಪುನೀತ್ ನಮ್ಮಿಂದ ದೂರವಾಗಿರುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಭೇಟಿಯಾಗಿದ್ದೆ.
ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಹುಟ್ಟೂರಿನಲ್ಲಿ ನೀರವ ಮೌನ ಭಾಗಮನೆಗೆ ವರ್ಷಕೊಮ್ಮೆ ಬರುತ್ತಿದ್ದರು. ಸದ್ಯದಲ್ಲೇ ಬರೋದಾಗಿ ಕೂಡ ಹೇಳಿದ್ರು. ಟಿವಿಯಲ್ಲಿ ಅಪ್ಪು ನಿಧನ ಸುದ್ದಿ ನೋಡಿ ನಾನು ಶಾಕ್ಗೆ ಒಳಗಾದೆ ಎಂದು ಅಶ್ವಿನಿಯವರ ಚಿಕ್ಕಪ್ಪನ ಮಗ ಭರತ್ ಹೇಳಿದ್ದಾರೆ.
ಅಪ್ಪುಗೆ ಅಕ್ಕಿರೊಟ್ಟಿ, ಚಿಕನ್ ಇಷ್ಟ : ಪುನೀತ್ ರಾಜಕುಮಾರ್ ನಮ್ಮ ಮನೆಗೆ ಬಂದಾಗ ಖುಷಿ ಆಗ್ತಿತ್ತು. ಅವರಿಗೆ ಅಕ್ಕಿರೊಟ್ಟಿ, ಚಿಕನ್ ಅಂದ್ರೆ ತುಂಬಾ ಇಷ್ಟ. ಪ್ರತಿ ಸಲ ಬಂದಾಗ ಕೂಡ ಮಾಡಿಸಿಕೊಂಡು ತಿನ್ನುತ್ತಿದ್ರು. ಮೊನ್ನೆ ಭಜರಂಗಿ2 ಕಾರ್ಯಕ್ರಮದ ಡ್ಯಾನ್ಸ್ ವಿಡಿಯೋ ನೋಡಿ ಖುಷಿ ಆಗಿತ್ತು. ಆದ್ರೆ, ಇವತ್ತು ತುಂಬಾ ಬೇಜಾರ್ ಆಗ್ತಿದೆ. ನಾನು ಕಾಲ್ ಮಾಡಿದಾಗ ತುಂಬಾ ಚೆನ್ನಾಗಿ ಮಾತಾನಾಡುತ್ತಿದ್ರು. ಚಿಕ್ಕಮಗಳೂರು ಅಂದ್ರೆ ಪುನೀತ್‌ಗೆ ತುಂಬಾ ಇಷ್ಟ ಎಂದು ಭರತ್ ಅಪ್ಪುವನ್ನ ನೆನಪಿಸಿಕೊಂಡರು.
ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ