ಚಿಕ್ಕಮಗಳೂರು: ನಟ ಪುನೀತ್ ರಾಜ್ಕುಮಾರ್ ಸಾವಿನಿಂದ ಮನನೊಂದು, ಅಭಿಮಾನಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರಾಂಪುರದಲ್ಲಿ ನಡೆದಿದೆ. ಶರತ್ (30) ಮನೆಯಲ್ಲಿ ನೇಣಿಗೆ ಶರಣಾದ ಪುನೀತ್ ಅಭಿಮಾನಿಯಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆಗೆ ಶರಣು - ಚಿಕ್ಕಮಗಳೂರಿನಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆಗೆ ಶರಣು
ನಿನ್ನೆಯಿಂದಲೂ ಪುನೀತ್ ರಾಜ್ಕುಮಾರ್ ಸಾವಿನ ಸುದ್ದಿ ಕೇಳಿ ಅಳುತ್ತಿದ್ದ ಶರತ್ನನ್ನು, ಮನೆಯವರು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ..
ಚಿಕ್ಕಮಗಳೂರಿನಲ್ಲಿ ಪುನೀತ್ ಅಭಿಮಾನಿ ಆತ್ಮಹತ್ಯೆಗೆ ಶರಣು
ನಿನ್ನೆಯಿಂದಲೂ ಪುನೀತ್ ರಾಜ್ಕುಮಾರ್ ಸಾವಿನ ಸುದ್ದಿ ಕೇಳಿ ಅಳುತ್ತಿದ್ದ ಶರತ್ನನ್ನು, ಮನೆಯವರು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶರತ್ ಚಿಕ್ಕಮಗಳೂರು ನಗರದಲ್ಲಿ ಹೋಟೆಲ್‍ಗಳಿಗೆ ಮರದ ಹೊಟ್ಟು ತುಂಬುವು ಕೆಲಸ ಮಾಡುತ್ತಿದ್ದ. ಶರತ್ಗೆ ಮದುವೆಯಾಗಿದ್ದು ಒಂದು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭೀಣಿ. ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.