ಚಿಕ್ಕಮಗಳೂರು: ಪತಿಗೆ ಸುಪಾರಿ ನೀಡಿ ಪತ್ನಿಯೇ ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಿ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿ ಮಧ್ಯೆಯಿಟ್ಟು ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಳೆದ 15 ದಿನಗಳ ಹಿಂದೆ ಬಾಳೆಹೊನ್ನೂರಿನ ರಿಚರ್ಡ್ ನರೋನ (48) ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಿಚರ್ಡ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನರೋನ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನು ಖಂಡಿಸಿ ರಿಚರ್ಡ್ ಮನೆಯ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ಬಾಳೆಹೊನ್ನೂರು - ಶೃಂಗೇರಿಯ ಹೆದ್ದಾರಿಯಲ್ಲಿರುವ ಶಾಂತಿಪುರದ ಬಳಿ ಮೃತದೇಹವನ್ನು ರಸ್ತೆಯ ಮಧ್ಯೆ ಇಟ್ಟು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.