ಚಿಕ್ಕಮಗಳೂರು: ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ಮೈಕ್ರೋ ಫೈನಾನ್ಸ್ಗಳ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ
ಮೈಕ್ರೋ ಫೈನಾನ್ಸ್ಗಳ ವಿರುದ್ದ ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಲ್ ಆ್ಯಂಡ್ ಟಿ, ಮುತ್ತೂಟ್, ಎಸ್ಕೆಎಸ್, ಸಮಸ್ತ, ಗ್ರಾಮೀಣ ಕೂಟ, ಸ್ಪಂದನ ಸ್ಪೂರ್ತಿ, ಆಶೀರ್ವಾದ ಭಾರತ್, ಆಕ್ಸಿಸ್ ಸೇರಿದಂತೆ ಹಲವಾರು ಖಾಸಗಿ ಫೈನಾನ್ಸ್ಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಫೈನಾನ್ಸ್ಗಳು ಹಳ್ಳಿಯ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ದುಬಾರಿ ಬಡ್ಡಿಯಲ್ಲಿ ಆಧಾರ ರಹಿತವಾಗಿ ಸಾಲವನ್ನು ಕೊಡುತ್ತಾ ಬಂದಿವೆ. ನಂತರದಲ್ಲಿ ಅವರಿಂದ ಹಣ ಸುಲಿಗೆ ಮಾಡುತ್ತಿವೆ ಎಂದು ಆರೋಪಿಸಿದರು.
ಈ ಸಂಸ್ಥೆಗಳು ಬಡವರಿಗೆ ಹಣ ನೀಡುತ್ತೇವೆಂದು ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೇ.11 ಹಾಗೂ ನಬಾರ್ಡ್ನಿಂದ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯುತ್ತವೆ. ಆದರೆ ಜನರಿಗೆ ಶೇ.20 ರಿಂದ ಶೇ.31ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಿ, ಪ್ರತಿ ವಾರ ಅವರಿಂದ ಬಲತ್ಕಾದಿಂದ ಹಣ ವಸೂಲಿ ಮಾಡುತ್ತಿವೆ. ರಾತ್ರಿ ಹಗಲು ಎನ್ನದೇ ಬಂದು ಹಣ ವಸೂಲಿ ಮಾಡುತ್ತಿದ್ದು, ಮಹಿಳೆಯರನ್ನು ಅವ್ಯಾಚ ಶಬ್ದಗಳಿಂದ ಸಿಬ್ಬಂದಿ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರ ವಿರುದ್ಧ ಯಾರು ಮಾತನಾಡುತ್ತಿಲ್ಲ. ನಮ್ಮ ರಕ್ಷಣೆಗೆ ಯಾರು ಇಲ್ಲದಂತಾಗಿದ್ದು, ಕೂಡಲೇ ಖಾಸಗಿ ಫೈನಾನ್ಸ್ಗಳಿಂದ ಸರ್ಕಾರ ಮುಕ್ತಿ ಕೊಡಿಸಬೇಕು ಎಂದು ಆಗ್ರಹಿಸಿದರು.