ಕರ್ನಾಟಕ

karnataka

ETV Bharat / state

ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ನೇಮಿಸಲು ಆಗ್ರಹಿಸಿ ಪ್ರತಿಭಟನೆ

ಎಐಟಿಯುಸಿ ಹಾಗೂ ಬಿಎಸ್​ಪಿ ನೇತೃತ್ವದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದ ಬಳಿ ನೂರಾರು ಕಾರ್ಮಿಕರು ಕೆಲಸದಿಂದ ತೆಗೆದು ಹಾಕಿರುವ ಹೊರ ಗುತ್ತಿಗೆ ನೌಕರರನ್ನು ಕೂಡಲೇ ಸೇರಿಸಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು.

protest-for-demanding-re-hire-of-outsourced-employees

By

Published : Aug 2, 2019, 11:14 PM IST

ಚಿಕ್ಕಮಗಳೂರು:ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ನಿರ್ಧಾರ ಖಂಡಿಸಿ ಅವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಒತ್ತಾಯಿಸಿ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಕಾರ್ಮಿಕರು ಹಾಗೂ ಬಿಸಿಎಂ ಇಲಾಖೆಯಲ್ಲಿ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುವ ನೌಕರರು ಪ್ರತಿಭಟನೆ ನಡೆಸಿದ್ರು.

ಎಐಟಿಯುಸಿ ಹಾಗೂ ಬಿಎಸ್​ಪಿ ನೇತೃತ್ವದಲ್ಲಿ ಪ್ರತಿಭಟನೆ

ಆಜಾದ್ ಪಾರ್ಕ್ ವೃತ್ತದಲ್ಲಿ ಎಐಟಿಯುಸಿ ಹಾಗೂ ಬಿಎಸ್​ಪಿ ನೇತೃತ್ವದಲ್ಲಿ ನೂರಾರು ಕಾರ್ಮಿಕರಿಂದ ರಾಜ್ಯ ಸರ್ಕಾರದ ವಿರುದ್ದ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.

ಕಳೆದ 15 -20 ವರ್ಷದಿಂದ ಕೆಲಸ ಮಾಡುತ್ತಿದ್ದ ಪುರುಷರು ಹಾಗೂ ಮಹಿಳೆಯರನ್ನು ನೌಕರಿಯಿಂದ ವಜಾಗೊಳಿಸಿ ಕೆಲ ತಿಂಗಳಿನಿಂದ ಕೆಲಸಕ್ಕೆ ಬರುತ್ತಿರುವ ಕಾರ್ಮಿಕರನ್ನು ಮುಂದುವರೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಈ ಹಿಂದೆ ಕುಮಾರಸ್ವಾಮಿ ಅವರ ಸರ್ಕಾರವಿದ್ದಾಗ ಹಲವಾರು ಜನರನ್ನು ಇದೇ ರೀತಿ ಕೆಲಸಕ್ಕೆ ಬಾರದಂತೆ ತೆಗೆದುಹಾಕಿದ್ದರು. ಆದರೆ ಜನ ಪ್ರತಿನಿಧಿಗಳೊಂದಿಗೆ ಮಾತನಾಡಿ ಮತ್ತೆ ಅವರಿಗೆ ಕೆಲಸಕೊಟ್ಟು ಮುಂದುವರಿಸಿದ್ದರು. ಆದರೇ ಯಡ್ಡಿಯೂರಪ್ಪ ಸರ್ಕಾರ ಬಂದ ಕೂಡಲೇ ಈ ರೀತಿಯ ತೀರ್ಮಾನ ಮಾಡಿರೋದು ಸರಿಯಲ್ಲ. ಹಾಗಾಗಿ ಕೂಡಲೇ ಕೆಲಸದಿಂದ ತೆಗೆದು ಹಾಕಿರುವ ಕೆಲಸಗಾರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಬಗ್ಗೆ ಎಚ್ಚರಿಸಿದ್ರು.

ABOUT THE AUTHOR

...view details