ಕರ್ನಾಟಕ

karnataka

ಅಕ್ರಮ ಗೋಸಾಗಣೆ ತಡೆದ ಹಿಂದೂ ಪರ ಕಾರ್ಯಕರ್ತರು: ಹಸುಗಳ ರಕ್ಷಣೆ

ಶೃಂಗೇರಿ ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ಅಕ್ರಮ ಗೋಸಾಗಣೆ ವಾಹನ ತಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಗೋವುಗಳನ್ನು ರಕ್ಷಿಸಿದ್ದಾರೆ.

By

Published : Jan 8, 2021, 1:23 PM IST

Published : Jan 8, 2021, 1:23 PM IST

Updated : Jan 9, 2021, 3:59 PM IST

ಅಕ್ರಮ ಗೋಸಾಗಣೆ ತಡೆದ ಹಿಂದೂ ಪರ ಕಾರ್ಯಕರ್ತರು: ಹಸುಗಳ ರಕ್ಷಣೆ
ಅಕ್ರಮ ಗೋಸಾಗಣೆ ತಡೆದ ಹಿಂದೂ ಪರ ಕಾರ್ಯಕರ್ತರು: ಹಸುಗಳ ರಕ್ಷಣೆ

ಚಿಕ್ಕಮಗಳೂರು :ಆಕ್ರಮ ಗೋ ಸಾಗಣೆ ಕ್ಯಾಂಟರ್ ತಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

ಶುಕ್ರವಾರ ನಸುಕಿನ ಜಾವ 2.30 ರ ಸುಮಾರಿಗೆ ಮಂಗಳೂರಿಗೆ ಹಸುಗಳನ್ನು ಸಾಗಿಸುತ್ತಿದ್ದ ವೇಳೆ, ಶೃಂಗೇರಿ ತಾಲೂಕು ತನಿಕೋಡು ಚೆಕ್ ಪೋಸ್ಟ್ ಬಳಿ‌ ಮತ್ತು ಆಗುಂಬೆ ರಸ್ತೆಯ ಕೈಮನೆ ಬಳಿ‌ ಕ್ಯಾಂಟರ್​ಗಳನ್ನು ಅಡ್ಡಗಟ್ಟಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಎರಡು ಕ್ಯಾಂಟರ್​ಗಳಲ್ಲಿ ಗೋವುಗಳನ್ನು ಮಂಗಳೂರಿನ ಕಸಾಯಿಖಾಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ತನಿಕೋಡು ಬಳಿ ಸಂಘಟನೆ ಕಾರ್ಯಕರ್ತರು ಒಂದು ವಾಹನವನ್ನು ಅಡ್ಡಗಟ್ಟಿದಾಗ, ಇನ್ನೊಂದು ವಾಹನ ಆಗುಂಬೆಯ ಕಡೆ ಮುಖ ಮಾಡಿತ್ತು. ಇದನ್ನು ತಿಳಿದ ಕಾರ್ಯಕರ್ತರು, ಕೈಮನೆ ಬಳಿ ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ್ದಾರೆ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಕ್ರಮ ಗೋಸಾಗಣೆ ತಡೆದ ಹಿಂದೂ ಪರ ಕಾರ್ಯಕರ್ತರು: ಹಸುಗಳ ರಕ್ಷಣೆ
Last Updated : Jan 9, 2021, 3:59 PM IST

ABOUT THE AUTHOR

...view details