ಕರ್ನಾಟಕ

karnataka

ETV Bharat / state

ಕೇಬಲ್​ ಅಳವಡಿಸಲು ರಸ್ತೆ ಅಗೆದ ಖಾಸಗಿ ಕಂಪನಿ, ವಾಹನ ಸವಾರರ ಪರದಾಟ - digging the road to install cableat Chikkamagalur

ಸ್ಥಳೀಯರು ಕೇಬಲ್ ಹಾಕುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕೇಬಲ್ ಹಾಕಿದ ಬಳಿಕ ಅದರ ಮೇಲೆ ಮಣ್ಣನ್ನ ಎಳೆದು ಹೋಗ್ತಿದ್ದಾರೆ. ಅದಕ್ಕೆ ಸೂಕ್ತ ಬಂದೋಬಸ್ತ್ ಮಾಡಬೇಕು.

ವಾಹನ ಸವಾರರ ಪರದಾಟ
ವಾಹನ ಸವಾರರ ಪರದಾಟ

By

Published : Sep 30, 2020, 4:16 PM IST

ಚಿಕ್ಕಮಗಳೂರು:ಜಿಲ್ಲೆಯ ಮುತ್ತೋಡಿ ಅರಣ್ಯ ಭಾಗದಲ್ಲಿನ ಹತ್ತಾರು ಹಳ್ಳಿಗಳಿಗೆ ಖಾಸಗಿ ಸಂಸ್ಥೆಯೊಂದು ಕೇಬಲ್ ಹಾಗೂ ಇಂಟರ್​​ನೆಟ್‍ ಸಂಪರ್ಕಿಸುವ ಸಲುವಾಗಿ ನೆಲದಲ್ಲಿ ಕೇಬಲ್ ಎಳೆಯುತ್ತಿದ್ದಾರೆ. ಗುಂಡಿ ತೆಗೆದು ಕೇಬಲ್ ಹಾಕಿ ಮತ್ತೆ ಮಣ್ಣನ್ನ ಮುಚ್ಚಿ ಹೋಗ್ತಿದ್ದಾರೆ. ಆದ್ರೆ, ಈ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಮಳೆಯಿಂದ ರಸ್ತೆ ಮೇಲೆ ಸಂಚರಿಸುವ ವಾಹನಗಳು ಮಣ್ಣಿನಲ್ಲಿ ಸ್ಕಿಡ್ ಆಗಿ ಕೇಬಲ್ ಗುಂಡಿಗೆ ಇಳಿಯುತ್ತಿವೆ.

ಕೇಬಲ್​ ಅಳವಡಿಸಲು ರಸ್ತೆ ಅಗೆದ ಖಾಸಗಿ ಕಂಪನಿ

ಇದರಿಂದ ವಾಹನ ಸವಾರರು ಗಂಟೆಗಟ್ಟಲೇ ನಿಂತಲ್ಲೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಲ್ಲಿ ಮೂರು ವಾಹನಗಳು ಈ ರೀತಿ ಸ್ಕಿಡ್​ ಆಗಿ ನಿಂತಿವೆ. ಕಳೆದ ಮೂರು ದಿನಗಳ ಹಿಂದೆ ಖಾಸಗಿ ಬಸ್ಸೊಂದು ಈ ರೀತಿ ರಸ್ತೆಯಲ್ಲಿ ಸಂಚರಿಸುವಾಗ ಸ್ಕಿಡ್ ಆಗಿ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಬಳಿಕ ಸ್ಥಳೀಯರು ಹಾಗೂ ಅಧಿಕಾರಿಗಳು ಜೆಸಿಬಿ ತಂದು ಬಸ್​​ನನ್ನ ಎಳೆದ ಮೇಲೆ ವಾಹನ ಸವಾರರು ಓಡಾಡುವಂತಾಯ್ತು.

ಕೇಬಲ್​ ಅಳವಡಿಸಲು ರಸ್ತೆ ಅಗೆದ ಖಾಸಗಿ ಕಂಪನಿ

ಹಾಗಾಗಿ ಸ್ಥಳೀಯರು ಕೇಬಲ್ ಹಾಕುವವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೇಬಲ್ ಹಾಕಿದ ಬಳಿಕ ಅದರ ಮೇಲೆ ಮಣ್ಣನ್ನ ಎಳೆದು ಹೋಗ್ತಿದ್ದಾರೆ. ಅದಕ್ಕೆ ಸೂಕ್ತ ಬಂದೋಬಸ್ತ್ ಮಾಡಬೇಕು. ಇಲ್ಲವಾದರೆ, ಈ ರೀತಿ ರಸ್ತೆ ಮೇಲೆ ಮಣ್ಣನ್ನ ಹಾಕೋದ್ರಿಂದ ಈ ರೀತಿ ಗಾಡಿಗಳು ಸ್ಕಿಡ್​ ಆಗಿ ನಿಲ್ಲೋದು ಕಾಮನ್ ಆಗುತ್ತೆ. ಇಲ್ಲವಾದರೆ ಮಣ್ಣನ್ನ ಅಗೆಯೋರು ರಸ್ತೆ ಬದಿಗೆ ಮಣ್ಣನ್ನ ಹಾಕದೆ ಮತ್ತೊಂದು ಬದಿಗೆ ಹಾಕಿ, ಕೇಬಲ್ ಎಳೆದ ಮೇಲೆ ಮಣ್ಣನ್ನ ಮುಚ್ಚುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details