ಚಿಕ್ಕಮಗಳೂರು : ಆತ್ಮಹತ್ಯೆಗೆ ಶರಣಾಗಿರೋ ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡರ ಅಂತಿಮ ಸಂಸ್ಕಾರವನ್ನು ಅವರ ಸ್ವ ಗ್ರಾಮದ ತೋಟದ ಮನೆಯಲ್ಲಿ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.
ಧರ್ಮೇಗೌಡರ ಸ್ವ ಗ್ರಾಮದ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ತಾಲೂಕಿನ ಸಖರಾಯಪಟ್ಟಣದ ಸರಪನಹಳ್ಳಿ ಯಲ್ಲಿರುವ ತೋಟದ ಮನೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ಗ್ರಾಮಸ್ಥರು ಹಾಗೂ ಅವರ ಸಂಬಂಧಿಕರು ತೋಟದ ಮನೆಗೆ ಆಗಮಿಸುತ್ತಿದ್ದಾರೆ.
ಅವರ ತೋಟದಲ್ಲಿಯೇ ಅಂತಿಮ ಸಂಸ್ಕಾರ ನಡೆಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ.
ಓದಿ : ಶಿವಮೊಗ್ಗ ಸಿಮ್ಸ್ ಶವಾಗಾರಕ್ಕೆ ಧರ್ಮೇಗೌಡರ ಮೃತದೇಹ ರವಾನೆ