ಚಿಕ್ಕಮಗಳೂರು:ದಲಿತ ಕಾರ್ಮಿಕರನ್ನ ಕೂಡಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕನ ವಿಡಿಯೋ ಮಾಡಿದ್ದಕ್ಕೆ ಗರ್ಭಿಣಿ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಗರ್ಭಿಣಿ ಮಹಿಳೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತೋಟದ ಮಾಲೀಕ ಜಗದೀಶ್ ಗೌಡ ಎಂಬುವರಿಂದ ಹಲ್ಲೆ ಮಾಡಿರುವ ಆರೋಪವಿದೆ. ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾಫಿ ತೋಟದ ಕೆಲಸಕ್ಕೆ ಸೇರುವಾಗ 9 ಲಕ್ಷ ಅಡ್ವಾನ್ಸ್ ಅನ್ನು ಮಾಲೀಕ ನೀಡಿದ್ದಾರೆ. ಈಗ ಬೇರೆಡೆ ಕೆಲ್ಸಕ್ಕೆ ಹೋಗುತ್ತೇವೆ ಎಂದಾಗ ಹಣ ವಾಪಸ್ ಕೇಳಿದ್ದಾರೆ. ಸಮಯ ನೀಡಿ ಹಣ ಕಟ್ಟಿ ಹೋಗ್ತೇವೆ ಎಂದರೂ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.