ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ದತ್ತಪೀಠ ಹಿಂದೂಗಳಿಗೆ ಮುಕ್ತವಾಗುತ್ತೆ ಎಂದು ಅಂದುಕೊಂಡಿದ್ದೆವು, ಆದರೆ ಅಗಲಿಲ್ಲ. ಸದ್ಯ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ದತ್ತಪೀಠವನ್ನು ಹಿಂದೂಗಳಿಗೆ ಸೇರುವಂತೆ ಮಾಡಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ದತ್ತಪೀಠ ಹಿಂದೂಗಳಿಗೆ ಮುಕ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು: ಪ್ರಮೋದ್ ಮುತಾಲಿಕ್
ದತ್ತಪೀಠದ ಹೆಸರಿನಿಂದ ರಾಜಕಾರಣಿಗಳು ಅಧಿಕಾರ ಹಿಡಿಯುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ದತ್ತಪೀಠವನ್ನು ಹಿಂದೂಗಳಿಗೆ ಮುಕ್ತವಾಗುವಂತೆ ಮಾಡುತ್ತಾರೆ ಎಂದು ಅಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಪ್ರಮೋದ್ ಮುತಾಲಿಕ್
ನಗರದಲ್ಲಿ ಈಟಿವಿ ಭಾರತನೊಂದಿಗೆ ಮಾತನಾಡಿದ ಅವರು, ಇಂದಿನ ರಾಜಕಾರಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜಾತಿ ಹಾಗೂ ದುಡ್ಡು ಗೂಂಡಾಗಿರಿ ನಡೆಯುತ್ತಿದೆ. ಆದರೂ ಆ ಶಾಪವನ್ನು ಮೀರಿ ಗೆದ್ದು ಬರುವಂತಹ ವ್ಯವಸ್ಥೆ ನಿರ್ಮಾಣ ಆಗಿದೆ. ದೇವರು ಇದೆಲ್ಲ ನೋಡಿಕೊಳ್ಳುತ್ತಾನೆ ಎಂದರು.
ಮಲೆನಾಡು ಭಾಗದಲ್ಲಿ ಶಾಸಕರು ಗೆದ್ದು ಬರಲು ದತ್ತಪೀಠದ ಪಾತ್ರ ತುಂಬಾ ದೊಡ್ಡದಿದೆ. ಶಾಸಕರು ಹಾಗೂ ಸಚಿವರು ಗೆದ್ದು ಬರುತ್ತಿರೋದು ದತ್ತಪೀಠದ ಹೆಸರಿನಿಂದಲೇ. ಅದಕ್ಕಾಗಿ ಕೂಡಲೇ ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.