ಚಿಕ್ಕಮಗಳೂರು: ರಾಮನ ಜನ್ಮಸ್ಥಾನಕ್ಕಾಗಿ ಐನೂರು ವರ್ಷ ಹೋರಾಟ ಮಾಡಬೇಕಾಯಿತು. ಅದೇ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು 500ವರ್ಷ ತೆಗೆದುಕೊಂಡು ಹೋಗುತ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು ಸಿ.ಟಿ ರವಿ ಅವರೇ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಿ ಟಿ ರವಿ ಮತ್ತು ಸಚಿವ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನೀವು ಅಧಿಕಾರದಲ್ಲಿ ಇರುವಾಗಲೇ ದತ್ತಪೀಠ ವಿವಾದವನ್ನು ಪರಿಹಾರ ಮಾಡಬಹುದು. ಹಿಂದೂ ಅರ್ಚಕರನ್ನು ನೇಮಿಸಿ ಪರಿಹಾರ ಮಾಡಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಹೇಳಿದ 24 ಗಂಟೆಯ ಒಳಗೆ ಅರ್ಚಕರನ್ನು ನೇಮಿಸಬಹುದಿತ್ತು. ಅರ್ಚಕರನ್ನು ನೇಮಿಸಿ ಪೂಜೆ ಪ್ರಾರಂಭ ಮಾಡಿದ್ರೆ ಏನ್ ಆಗುತ್ತಿತ್ತು ಸಿ ಟಿ ರವಿಯವರೇ ಎಂದು ಪ್ರಶ್ನಿಸಿದರು.