ಚಿಕ್ಕಮಗಳೂರು:ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಂ ಬೀದಿಗೆ ಹೋದರೂ ಒಂದೂ ವೋಟ್ ಬೀಳಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ವೋಟಿಗಾಗಿ ಬಿಜೆಪಿಯವರು ಸೆಕ್ಯೂಲರ್ ಆಗಲು ಹೊರಟಿದ್ದಾರೆ: ಪ್ರಮೋದ್ ಮುತಾಲಿಕ್ - ಕಾಂಗ್ರೆಸ್ ,ಬಿಜೆಪಿ ವಿರುದ್ಧ ಮುತಾಲಿಕ್ ಆಕ್ರೋಶ
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚಿಕ್ಕಮಗಳೂರಲ್ಲಿ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೋಟಿಗಾಗಿ ಬಿಜೆಪಿಯರವರು ಸೆಕ್ಯೂಲರ್ ಆಗಲು ಹೊರಟಿದ್ದಾರೆ. ದೇವಸ್ಥಾನ ಕೆಡವಿದ್ದು, ಗಣೇಶೋತ್ಸವ, ದತ್ತಪೀಠ ವಿಚಾರದಲ್ಲಿ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ. ಹಿಂದೂಗಳು ನಿಮ್ಮನ್ನು ಗೆಲ್ಲಿಸಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇರೋದೆ ಮುಸ್ಲಿಮರಿಗಾಗಿ, ನಾಳೆ ಅವರ ಮಕ್ಕಳು, ಮೊಮ್ಮಕ್ಕಳು ಮುಸಲ್ಮಾನರಾಗುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.