ಚಿಕ್ಕಮಗಳೂರು :ಮಲೆನಾಡಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಭೂಕುಸಿತ, ಗುಡ್ಡಕುಸಿತಗಳು ಉಂಟಾಗಿವೆ. ವರುಣನ ಆರ್ಭಟಕ್ಕೆ ಕಂಗಾಲಾದ ಜನ ನಾಯಕರು ದೇವರ ಮೊರೆ ಹೋಗಿದ್ದಾರೆ.
ಅತಿವೃಷ್ಟಿ ತಡೆಯಲು ಶೃಂಗೇರಿ ದೇವರ ಮೊರೆ ಹೋದ ಜನಪ್ರತಿನಿಧಿಗಳು
ವರುಣಾಘಾತಕ್ಕೆ ಹೆದರಿದ ಜನ ನಾಯಕರು- ಮಳೆ ಕಡಿಮೆ ಮಾಡುವಂತೆ ದೇವರ ಮೊರೆ ಹೋದ ಜನಪ್ರತಿನಿಧಿಗಳು- ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್, ಶಾಸಕ ರಾಜೇಗೌಡರಿಂದ ಶ್ರೀಗಳ ಭೇಟಿ
ಶ್ರೀ ಗಳ ಮೊರೆ ಹೋದ ಜನಪ್ರತಿನಿಧಿಗಳು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ. ಡಿ. ರಾಜೇಗೌಡ ಇಬ್ಬರೂ ಸೇರಿ ಶೃಂಗೇರಿ ಶಾರದಾಂಬೆ ಪೀಠದ ಜಗದ್ಗುರು ಭಾರತಿ ತೀರ್ಥ ಸ್ವಾಮೀಜಿಗಳ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಒಟ್ಟೊಟ್ಟಿಗೆ ಮೊರೆ ಹೋಗಿರುವುದು ವಿಶೇಷವಾಗಿದೆ.
ಇದನ್ನೂ ಓದಿ :ತೀರ್ಥಹಳ್ಳಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ