ಕರ್ನಾಟಕ

karnataka

ETV Bharat / state

ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ಮನೆ ಮೇಲೆ ಪೊಲೀಸ್​ ದಾಳಿ - ಅಕ್ರಮ ಪೈಪ್​ಗಳ ಸಂಗ್ರಹ ಆರೋಪ

ನಗರದಲ್ಲಿ ನೆಲೆಸಿರುವ ಚಿತ್ರದುರ್ಗ ಜಿಲ್ಲೆಯ ಮಾಜಿ ಸಂಸದ ಚಂದ್ರಪ್ಪ ಅವರು ಅಕ್ರಮವಾಗಿ ಪೈಪ್​ಗಳನನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

Police raided Former MLA Chandrappa house

By

Published : Nov 7, 2019, 5:03 PM IST

ಚಿಕ್ಕಮಗಳೂರು:ನಗರದಲ್ಲಿರುವ ಜಿಲ್ಲೆಯ ಮಾಜಿ ಸಂಸದ ಚಂದ್ರಪ್ಪ ಅವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಮಾಜಿ ಸಂಸದ ಚಂದ್ರಪ್ಪ ಮನೆ ಮೇಲೆ ಪೊಲೀಸ್​ ದಾಳಿ

ಸೀತಾರಾಮ್ ಎಂಬುವರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ದಾಳಿ ನಡೆಸಿದ್ದು, ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಹುರುಳಿಬಾರೆ ಗ್ರಾಮದ ತೋಟದ ಮನೆಯಲ್ಲಿ ಲೋಡ್​ ಗಟ್ಟಲೇ ಅಕ್ರಮವಾಗಿ ಪಿವಿಸಿ ಪೈಪ್ ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ದೂರಿನ ಪ್ರತಿ

ಅಲ್ಲದೇ ಗ್ರಾಮದ ಅಂಬೇಡ್ಕರ್ ಭವನದಲ್ಲಿಯೂ ಪೈಪ್​ಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ಆರೋಪವು ಕೇಳಿ ಬಂದಿದೆ. ಲಕ್ಕವಳ್ಳಿ ಪೊಲೀಸರು ಈ ದಾಳಿ ನಡೆಸಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details