ಕರ್ನಾಟಕ

karnataka

ETV Bharat / state

ತೀವ್ರಗೊಂಡ ಪೌರತ್ವದ ಕಿಚ್ಚು...ಮಲೆನಾಡು ಭಾಗದಲ್ಲಿ ಖಾಕಿ ಕಣ್ಗಾವಲು.. ಹಲವೆಡೆ ಇಂಟರ್​​ನೆಟ್​​ ಸೇವೆ ಸ್ಥಗಿತ - ಚಿಕ್ಕಮಗಳೂರಲ್ಲಿ ಪೊಲೀಸ್​​ ನಿಯೋಜನೆ ಸುದ್ದಿ

ದೇಶದೆಲ್ಲೆಡೆ ಪೌರತ್ವದ ಕಿಚ್ಚು ಹೆಚ್ಚಾದ ಹಿನ್ನೆಲೆ ಚಿಕ್ಕಮಗಳೂರು ಭಾಗದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​​ ಏರ್ಪಡಿಸಲಾಗಿದೆ.

police
ಮಲೆನಾಡು ಭಾಗದಲ್ಲಿ ಖಾಕಿ ಕಣ್ಗಾವಲು

By

Published : Dec 20, 2019, 4:44 PM IST

ಚಿಕ್ಕಮಗಳೂರು:ಮಂಗಳೂರಿನಲ್ಲಿ ಪೌರತ್ವದ ಕಿಚ್ಚು ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆ ಚಿಕ್ಕಮಗಳೂರು ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಬಿಗಿ ಪೊಲೀಸ್​​ ಬಂದೋಬಸ್ತ್​​​ ಏರ್ಪಡಿಸಲಾಗಿದೆ.

ಮಲೆನಾಡು ಭಾಗದಲ್ಲಿ ಖಾಕಿ ಕಣ್ಗಾವಲು

ಕೆಲ ಖಾಸಗಿ ಸಂಸ್ಥೆಗಳ ಇಂಟರ್​​ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು,ಜಯಪುರ, ಕೊಪ್ಪ, ತಾಲೂಕಿನಲ್ಲಿ ಹಲವಾರು ಭಾಗದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದ್ದು, ತಾತ್ಕಲಿಕವಾಗಿ ಇಂಟರ್​​​ನೆಟ್ ಸ್ಥಗಿತಗೊಳಿಸಲಾಗುವುದು ಎಂದೂ ಮೆಸೇಜ್ ಬಂದಿದ್ದು ಸರ್ಕಾರದ ಆದೇಶದ ಪ್ರಕಾರ ಮುಂದಿನ ಸೂಚನೆ ಬರುವವರೆಗೂ ನಿಮ್ಮ ಪ್ರದೇಶದಲ್ಲಿ ಇಂಟರ್ ನೇಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂಬ ಎಸ್​​ಎಂಎಸ್​ಗಳು ಬಂದಿವೆ.ಇನ್ನು ಜಿಲ್ಲೆಯ ಗಡಿ ಭಾಗಗಳಲ್ಲಿ ಖಾಕಿ ಕಣ್ಗಾವಲಿಟ್ಟಿದ್ದು, ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ವಾಹನ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಹೋಗುವಂತಹ ಪ್ರತಿಯೊಂದು ವಾಹನಗಳನ್ನು ಪೋಲಿಸರು ತಪಾಸಣೆ ನಡೆಸುತ್ತಿದ್ದಾರೆ.

ಮಲೆನಾಡು ಭಾಗದಲ್ಲಿ ಖಾಕಿ ಕಣ್ಗಾವಲು

ಡಿವೈಎಸ್​​ಪಿ ನೇತೃತ್ವದಲ್ಲಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಯುತ್ತಿದ್ದು, ಕೊಟ್ಟಿಗೆಹಾರ ಚೆಕ್​​ಪೋಸ್ಟ್ ಹಾಗೂ ಬಣಕಲ್​​​ನಲ್ಲಿ ಸಂಚಾರ ಮಾಡುವ ವಾಹನಗಳ ಮೇಲೆ ಪೊಲೀಸ್​ ಇಲಾಖೆ ತೀವ್ರ ನಿಗಾ ಇಟ್ಟಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂದು ಭಾರಿ ಬಂದೋಬಸ್ತ್​​ ಕೈಗೊಳ್ಳಲಾಗಿದೆ.

For All Latest Updates

ABOUT THE AUTHOR

...view details