ಚಿಕ್ಕಮಗಳೂರು: ಬೈಕ್ ವ್ಹೀಲಿಂಗ್ ಮಾಡಿ ಪುಂಡಾಟಿಕೆ ತೋರಿದವರಿಗೆ ಕಾಫಿನಾಡಿನ ಪೊಲೀಸರು ಚಳಿ ಬಿಡಿಸಿದ್ದಾರೆ. ವ್ಹೀಲಿಂಗ್ ಶೋಕಿ ಮಾಡಿದವರಿಗೆ ಪೊಲೀಸರು ಬುಲ್ಡೋಜರ್ ಟ್ರೀಟ್ಮೆಂಟ್ ನೀಡಿದ್ದು, ಕರ್ಕಶ ಶಬ್ದ ಮಾಡುತ್ತಿದ್ದ ಸೈಲೆನ್ಸರ್ ಗಳನ್ನ ಪೊಲೀಸರು ಪುಡಿ ಪುಡಿ ಮಾಡಿದ್ದಾರೆ.
ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸರರಿಂದ ಸೈಲೆನ್ಸರ್ ಉಡೀಸ್ ಕಾರ್ಯ ನಡೆದಿದೆ. ನಿನ್ನೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಯುವಕರು ಬೈಕ್ ವ್ಹೀಲಿಂಗ್ ಮಾಡಿದ್ದರು. ಯುವಕರ ವ್ಹೀಲಿಂಗ್ ಹುಚ್ಚಾಟಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆ ವ್ಹೀಲಿಂಗ್ ಹುಚ್ಚಾಟದ ಬಗ್ಗೆ ವಿಡಿಯೋ ಮಾಡಿ ಎಸ್ಪಿಗೆ ಕಳುಹಿಸಿದ್ದರು.