ಚಿಕ್ಕಮಗಳೂರು :ಇಂಧನ ಬೆಲೆ ಗಗನಮುಖಿ ಆಗಿರೋ ಹಿನ್ನೆಲೆ ನೂತನ ವಧು-ವರರಿಗೆ ಪೆಟ್ರೋಲ್ ಉಡುಗೊರೆ ನೀಡಿರೋ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಹೊಸ ಜೋಡಿಗೆ ಪ್ರೀತಿಯೇ 'ಇಂಧನ'.. ದಂಪತಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು ಸೆಳೆದರು ಗಮನ.. - ನವ ದಂಪತಿಗಳಿಗೆ ಪೆಟ್ರೋಲ್ ಗಿಫ್ಟ್
ಇಂಧನ ಬೆಲೆ ಏರಿಕೆ ಹಿನ್ನೆಲೆ ನವ ದಂಪತಿಗಳಿಗೆ ಮೂರು ಲೀಟರ್ ಪೆಟ್ರೋಲ್ ಉಡುಗೂರೆಯಾಗಿ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಪೆಟ್ರೋಲ್ ಬಾಟಲಿ ನೋಡಿ ನವದಂಪತಿಗಳು ಹಾಗೂ ಮದುವೆಗೆ ಬಂದಿದ್ದ ಇತರೇ ಜನಸಾಮಾನ್ಯರು ಉಡುಗೊರೆ ನೋಡಿ ನಸುನಕ್ಕಿದ್ದಾರೆ.
ಪೆಟ್ರೋಲ್ ಗಿಫ್ಟ್
ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಎಂಬುವರ ಮದುವೆ ನಡೆಯಿತು. ಈ ವೇಳೆ ವೇದಿಕೆ ಮೇಲೆ ರಿಸೆಪ್ಷನ್‍ಗೆ ನಿಂತಿದ್ದ ದಂಪತಿಗೆ ಮದುವೆ ಗಂಡು ಸಚಿನ್ ಅವರ ಸ್ನೇಹಿತರು ಮೂರು ಲೀಟರ್ ಪೆಟ್ರೋಲ್ ಅನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
ನವದಂಪತಿ ಹಾಗೂ ಮದುವೆಗೆ ಬಂದಿದ್ದ ಇತರರು ಪೆಟ್ರೋಲ್ ಬಾಟಲಿಯಲ್ಲಿದ್ದಉಡುಗೊರೆ ನೋಡಿ ನಸುನಕ್ಕಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.