ಚಿಕ್ಕಮಗಳೂರು :ಫೇಸ್‍ಬುಕ್ ಬಳಕೆ ಮಾಡುವ ಗ್ರಾಹಕರು ನಿತ್ಯ ತಮ್ಮ ಅಕೌಂಟ್ ಮೇಲೆ ನಿಗಾ ಇಟ್ಟಿರಬೇಕಾಗಿರುವ ಪರಿಸ್ಥಿತಿ ಬಂದು ಎರಗಿದೆ. ನಿಮ್ಮ ಹೆಸರಿನಲ್ಲಿರುವ ಅಕೌಂಟ್ನಲ್ಲಿ ನಿಮ್ಮ ಸ್ನೇಹಿತರಿಗೆ ಫ್ರೆಂಡ್ ರಿಕ್ವಿಸ್ಟ್ ಹೋಗಿರಬಹುದು. ಒಮ್ಮೆ ಚೆಕ್ ಮಾಡಿಕೊಂಡರೇ ತುಂಬಾ ಒಳ್ಳೆಯದು.
ಇವತ್ತು ಫ್ರೆಂಡ್ ರಿಕ್ವೆಸ್ಟ್ ಹೋಗುತ್ತೆ. ನಾಳೆ ಅದೇ ಅಕೌಂಟ್‌ನ ಮೆಸೇಂಜರ್ ಮೂಲಕ ಹಣ ಕೇಳುತ್ತಾರೆ. ಈ ರೀತಿ ಮಾಡಿ ನಿಮ್ಮ ಮರ್ಯಾದೆ ಹಾಳು ಮಾಡುತ್ತಾರೆ. ಚೆನ್ನಾಗಿರೋ ನಿಮಗೆ ಆಸ್ಪತ್ರೆಯ ಐಸಿಯುನಲ್ಲಿ ಮಲಗಿಸುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಹೆಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರೋ ಆದರ್ಶ್ ಎಂಬ ಯುವಕನಿಗೆ ಇದೇ ರೀತಿ ಸಮಸ್ಯೆ ಎದುರಾಗಿದೆ.
ಯುವಕ ಆದರ್ಶನ ಫೇಸ್‍ಬುಕ್ ಪ್ರೊಫೈಲ್ ಪೋಟೋ ಡೌನ್‍ಲೋಡ್ ಮಾಡಿಕೊಂಡು ಅವರ ಹೆಸರಿನಲ್ಲೇ ಮತ್ತೊಂದು ಖಾತೆ ತೆರೆದು ಅವರ ಎಲ್ಲಾ ಫ್ರೆಂಡ್ಸ್ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ಈ ರೀತಿ ಮಾಡಿ ಎರಡ್ಮೂರು ಜನರಿಂದ ಹಣ ಪೀಕಿದ್ದಾರೆ.
ನಖಲಿ ಅಕೌಂಟ್ ಕ್ರಿಯೇಟ್ ಮಾಡಿ ಮೆಸೆಂಜರ್ನಲ್ಲಿ ಮೆಸೇಜ್ ಮಾಡುವ ಖದೀಮರು, ಐ ಆ್ಯಮ್ ಸೀರಿಯಸ್. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ತಕ್ಷಣ ಹಣ ಹಾಕಿ ಅಂತಾ ಗೂಗಲ್ ಪೇ, ಫೋನ್ ಪೇ ನಂಬರ್ ಕಳಿಸುತ್ತಾರೆ. ಎರಡ್ಮೂರು ಜನ 10-20 ಸಾವಿರ ಹಣ ಹಾಕಿದ್ದಾರೆ. ಕೆಲ ಸ್ನೇಹಿತರಿಗೆ ಅನುಮಾನ ಬಂದು ಆದರ್ಶ್‍ಗೆ ಕರೆ ಮಾಡಿದಾಗ ಫೇಕ್ ಖಾತೆ ಬಗ್ಗೆ ಬೆಳಕಿಗೆ ಬಂದಿದೆ.
ಮೆಸೆೇಂಜರ್ನಲ್ಲಿ ಬಂದ ಸಂದೇಶ ವಿಚಾರ ತಿಳಿಯುತ್ತಿದ್ದಂತೆ ಆದರ್ಶ್, ತನ್ನ ಫೇಸ್ಬುಕ್ ಮುಖಪುಟದಲ್ಲಿ ಫೇಕ್ ಅಕೌಂಟ್‌ನಿಂದ ರಿಕ್ವೆಸ್ಟ್ ಬಂದ್ರೆ ಯಾರೂ ಸ್ವೀಕರಿಸಬೇಡಿ, ಹಣ ಹಾಕಬೇಡಿ ಅಂತಾ ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಮೋಸ ನೋಡಿ ಕೆಲವರು ಬೆಚ್ಚಿ ಬಿದ್ದಿದ್ದಾರೆ.
ಫೇಸ್ಬುಕ್ ಮೂಲಕ ಜನರನ್ನು ಈ ರೀತಿಯೂ ಯಾಮಾರಿಸಬಹುದಾ? ಎಂದೂ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಆದರೆ, ಬೇರೆಯವರ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಕೆಲಸ ಇದರಿಂದ ನಡೆಯುತ್ತಿದೆ.