ಚಿಕ್ಕಮಗಳೂರು: ದೇಶವೇ ಲಾಕ್ಡೌನ್ ಆಗಿದ್ದರೂ ನಗರದ ಎಂ.ಜಿ. ರಸ್ತೆ, ಐ.ಜಿ. ರಸ್ತೆಯಲ್ಲಿ ಜನರು ಬೀದಿಗಿಳಿದಿದ್ದು ಕಂಡು ಬಂತು. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಬೈಕ್ ಸವಾರರು ನಿರ್ಭಯವಾಗಿ ಸಂಚರಿಸುತ್ತಿದ್ದರು.
ಲಾಕ್ಡೌನ್ಗೆ ತಲೆ ಕೆಡಿಸಿಕೊಳ್ಳದ ಜನ: ಚಿಕ್ಕಮಗಳೂರಲ್ಲಿ ರಸ್ತೆಗಿಳಿದ ವಾಹನಗಳು - follow the lock down order
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಇದರಿಂದ ಜನರು ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ಜಿಲ್ಲೆಯಲ್ಲಿ ಮೂಡಿದೆ.
ಲಾಕ್ಡೌನ್ಗೆ ತಲೆಕೆಡಿಸಿಕೊಳ್ಳದ ಜನರು
ಕೊರೊನಾ ಸೋಂಕು ತಡೆಗೆ 2ನೇ ಹಂತದ ಲಾಕ್ಡೌನ್ ಆದೇಶ ನೀಡಲಾಗಿದೆ. ಆದರೆ, ಚಿಕ್ಕಮಗಳೂರು ಜನರು ಇದಕ್ಕೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹಾಗಾಗಿ ಜನರು ಬೀದಿಗಿಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಅಪಾಯಕಾರಿ ನಡೆಯಿಂದ ಸೋಂಕಿತ ಜಿಲ್ಲೆಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ತುರ್ತು ನಮ್ಮೆಲ್ಲರದ್ದಾಗಿದೆ.