ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿಗೂ ವ್ಯಾಪಿಸಿದ 'ವ್ಯಾಪಾರ ಫೈಟ್'.. ಜಾತ್ರೆಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧಕ್ಕೆ ಒತ್ತಾಯ - ಮುಸ್ಲಿಂ ವ್ಯಾಪಾರಿಗಳ ಮೇಲೆ ನಿಷೇಧ

ಉಡುಪಿ, ಶಿವಮೊಗ್ಗ ಬಳಿಕ ಇದೀಗ ಚಿಕ್ಕಮಗಳೂರಿಗೂ 'ವ್ಯಾಪಾರ' ಕದನ ಅಡಿ ಇಟ್ಟಿದೆ. ಅನ್ಯಮತೀಯರು ಜಾತ್ರೆಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಬೇಕು ಎಂದು ಜಾತ್ರೆ ನಡೆಯುವ ಗ್ರಾಮಗಳ ಆಯಾ ಗ್ರಾಮ ಪಂಚಾಯತ್​ಗಳಿಗೆ ಮನವಿ ಸಲ್ಲಿಸಲಾಗಿದೆ.

muslim-trade
ವ್ಯಾಪಾರ ಫೈಟ್

By

Published : Mar 23, 2022, 8:45 PM IST

ಚಿಕ್ಕಮಗಳೂರು:ಕಾಫಿನಾಡಿನಲ್ಲೂ ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿರ್ಬಂಧಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಜಿಲ್ಲೆಯಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಯೇತರ ವ್ಯಾಪಾರಿಗಳನ್ನು ನಿಷೇಧ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಶೃಂಗೇರಿ ತಾಲೂಕಿನ ಕಿಗ್ಗಾ, ಚಿತ್ರವಳ್ಳಿ, ಅಡ್ಡಗದ್ದೆ ಜಾತ್ರೆಯಲ್ಲಿ ಅನ್ಯಮತೀಯರು ವ್ಯಾಪಾರ ಮಾಡುವುದನ್ನು ನಿಷೇಧಿಸುವಂತೆ ಗ್ರಾಮಸ್ಥರಿಂದ ಮನವಿ ಮಾಡಲಾಗಿದೆ.

ಋಷ್ಯಶೃಂಗ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಅನ್ಯ ಧರ್ಮೀಯರ ವ್ಯಾಪಾರ ನಿಷೇಧಕ್ಕೆ ಮನವಿ

ಮುಂದೆ ನಡೆಯುವ ಋಷ್ಯಶೃಂಗ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಹಿಂದೂಗಳ ಹೊರತಾಗಿ ಅನ್ಯ ಧರ್ಮೀಯರು ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಬೇಕು. ಜಾತ್ರೆಯಲ್ಲಿ ಅಂಗಡಿ, ಮಳಿಗೆ ತೆರೆಯಲು ಅವಕಾಶ ನೀಡದಂತೆ ಮರ್ಕಲ್ ಗ್ರಾಮ ಪಂಚಾಯಿತಿಗೆ ಅಲ್ಲಿನ ಮನವಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಕ್ರಮಕೈಗೊಳ್ಳಲು ಮನವಿಯಲ್ಲಿ ವಿವಿಧ ಗ್ರಾಮಗಲ ಜನರು ಒತ್ತಾಯಿಸಿದ್ದಾರೆ.

ಚಿತ್ರವಳ್ಳಿ ವನದುರ್ಗ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಕ್ಕೆ ಮನವಿ

ಇದಲ್ಲದೇ, ಚಿತ್ರವಳ್ಳಿ ಜಾತ್ರೆ, ಅಡ್ಡಗದ್ದೆ ಗ್ರಾಮದ ವನದುರ್ಗಾ ಪರಮೇಶ್ವರಿ ಜಾತ್ರೆಗೂ ಅನ್ಯಧರ್ಮಿಯರಿಗೆ ಅಂಗಡಿ, ಮಳಿಗೆ ತೆರೆಯಲು ಅವಕಾಶ ನೀಡದಂತೆ ಅಡ್ಡಗದ್ದೆ ಗ್ರಾಮ ಪಂಚಾಯತ್​ಗೆ ಸ್ಥಳೀಯರು ಸ್ಥಳೀಯರು ಮನವಿ ಮಾಡಿದ್ದಾರೆ.

ಓದಿ:ದ್ವೇಷದ ದಳ್ಳುರಿಗೆ ಬಲಿಯಾಗುತ್ತಿವೆ ಜೀವಗಳು.. ಶಿಕ್ಷಣಕಾಶಿ ಖ್ಯಾತಿಯ ಜಿಲ್ಲೆ ಮೇಲೆ ಅಪರಾಧಗಳ ಕರಿನೆರಳು!

ABOUT THE AUTHOR

...view details