ಕರ್ನಾಟಕ

karnataka

ETV Bharat / state

ತುತ್ತು ಅನ್ನಕ್ಕೂ ಅಲೆದಾಟ: ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಹಕ್ಕಿಪಿಕ್ಕಿ ಜನರ ಪ್ರತಿಭಟನೆ - ಚಿಕ್ಕಮಗಳೂರು ಜಿಲ್ಲಾಧಿಕಾರಿ

ಸರಿಯಾಗಿ ತಮ್ಮ ಕುಟುಂಬಗಳಿಗೆ ಆಹಾರ ಸಿಗದೇ ಈ ಹಕ್ಕಿ ಪಿಕ್ಕಿ ಜನಾಂಗದ ಮಹಿಳೆಯರು ಬೀದಿಗೆ ಬಂದಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ನಮಗೆ ಯಾವುದೇ ಆಹಾರ ಧಾನ್ಯಗಳು ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಸಿವಿನಿಂದ ಸಾಯುವ ಬದಲು ನಾವು ಕೊರೊನಾ ಬಂದೇ ಸಾಯುತ್ತೇವೆ ಬಿಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

People protests near Chikkamagalur DC office
ತುತ್ತು ಅನ್ನಕ್ಕೂ ಅಲೆದಾಟ: ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಹಕ್ಕಿಪಿಕ್ಕಿ ಜನರ ಪ್ರತಿಭಟನೆ

By

Published : Apr 23, 2020, 9:09 PM IST

ಚಿಕ್ಕಮಗಳೂರು:ಕೊರೊನಾ ವೈರಸ್ ಹಾಗೂ ಲಾಕ್​​ಡೌನ್​ನಿಂದಾಗಿ ಸಾವಿರಾರೂ ಜನರಿಗೆ ನಿತ್ಯ ತೊಂದರೆ ಆಗುತ್ತಲೇ ಇದೆ. ಕೆಲವರಿಗೆ ಸರಿಯಾದ ಸಮಯಕ್ಕೆ ತಿನ್ನಲು ಅನ್ನವೂ ಸಿಗದೇ ಪರದಾಟ ನಡೆಸುತ್ತಿದ್ದಾರೆ.

ಇದೇ ರೀತಿಯ ಘಟನೆ ಚಿಕ್ಕಮಗಳೂರು ನಗರದಲ್ಲಿ ಬೆಳಕಿಗೆ ಬಂದಿದ್ದು ತಿನ್ನಲು ಅನ್ನ ಕೊಡಿ ಎಂದು ಹಕ್ಕಿ ಪಿಕ್ಕಿ ಜನಾಂಗದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಕುಳಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುತ್ತು ಅನ್ನಕ್ಕೂ ಅಲೆದಾಟ: ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಹಕ್ಕಿಪಿಕ್ಕಿ ಜನರ ಪ್ರತಿಭಟನೆ

ಸರಿಯಾಗಿ ತಮ್ಮ ಕುಟುಂಬಳಿಗೆ ಆಹಾರ ಸಿಗದೇ ಈ ಹಕ್ಕಿ ಪಿಕ್ಕಿ ಜನಾಂಗದ ಮಹಿಳೆಯರು ಬೀದಿಗೆ ಬಂದಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ನಮಗೆ ಯಾವುದೇ ಆಹಾರ ಧಾನ್ಯಗಳು ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಸಿವಿನಿಂದ ಸಾಯುವ ಬದಲು ನಾವು ಕೊರೊನಾ ಬಂದೇ ಸಾಯುತ್ತೇವೆ ಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಕೂಲಿ ಕೆಲಸವೂ ಇಲ್ಲ ಹೊಟ್ಟೆಗೆ ಅನ್ನವೂ ಇಲ್ಲ, ಕೂಡಲೇ ಆಹಾರ ಸಾಮಗ್ರಿ ಒದಗಿಸುವಂತೆ ಮಹಿಳೆಯರು ಆಗ್ರಹಿಸಿದ್ದು ನಗರ ಪೋಲಿಸ್ ಠಾಣೆಯ ಪಿಎಸ್​ಐ ತೇಜಸ್ವಿ ಅವರು ಸ್ಥಳಕ್ಕೇ ಬಂದು ನಿಮಗೆ ಎಲ್ಲಾ ರೀತಿಯಾ ಸವಲತ್ತು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ABOUT THE AUTHOR

...view details