ಚಿಕ್ಕಮಗಳೂರು:ರಸ್ತೆಯೊಂದರಲ್ಲಿ ವಾಹನ ಅಪಘಾತಕ್ಕೊಳಗಾಗಿ ಬಿದ್ದು ರಕ್ತ ಸುರಿಸಿಕೊಂಡು ನರಳಾಡುತ್ತಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಬೇಲೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಸ್ತೆ ದಾಟುವ ವೇಳೆ ಹಸುವಿಗೆ ಕಾರ್ ಗುದ್ದಿದ ಪರಿಣಾಮ ರಸ್ತೆಯಲ್ಲಿ ರಕ್ತ ಸುರಿಸಿಕೊಂಡು ನರಳಾಡುತ್ತಿದ್ದ ಹಸುವನ್ನು ಕಂಡ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಮೂಕ ಪ್ರಾಣಿಯ ರಕ್ಷಣೆ ಮಾಡಿದ್ದಾರೆ.
ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ಜನತೆ ನೀರು ಕುಡಿಸಿ ಹಸು ಎಬ್ಬಿಸುವ ಪ್ರಯತ್ನ ಮಾಡಿದ್ದು ಬೆನ್ನಿನ ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಹಸು ರಸ್ತೆಯಲ್ಲೇ ಒಂದು ಗಂಟೆಗೂ ಹೆಚ್ಚು ಕಾಲ ನೋವುನು ತಡೆಯಲಾರದೇ ಮೂಕ ರೋಧನೆ ಅನುಭವಿಸಿದೆ. ಹಸುವಿನ ಮೂಗಿನಲ್ಲಿ ಸುರಿಯುತ್ತಿದ್ದ ರಕ್ತವನ್ನು ಕಂಡ ನೆರೆದಿದ್ದವರು ಪಶು ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಹಸು ರಕ್ಷಿಸಿದ್ದಾರೆ.
ಅಪಘಾತದ ದೃಶ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಈ ಹಸುವಿನ ರಕ್ಷಣೆ ಮಾಡಿದ ಜನರಿಗೆ ಸಾಮಾಜಿಕ ಜಾಲತಾಣಗಳಲ್ಲೇ ಶ್ಲಾಘನೆ ವ್ಯಕ್ತವಾಗುತ್ತಿದೆ.