ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ ಕಾನೂನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ.
ಚಾರ್ಮಾಡಿ ಘಾಟಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್... ಸಾರ್ವಜನಿಕರಿಂದ ಕಿಡಿ - Pre wedding photoshoot in charmady
ರಾಷ್ಟ್ರೀಯ ಹೆದ್ದಾರಿ, ಅರಣ್ಯ ಪ್ರದೇಶದ ಅಸುಪಾಸಿನಲ್ಲಿಯೇ ನವ ಜೋಡಿಯೊಂದು ನಾನಾ ಭಂಗಿಯ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
Photo shoot in charmady ghat
ಚಾರ್ಮಾಡಿ ಘಾಟಿಯ ನಡು ರಸ್ತೆಯಲ್ಲಿಯೇ ನವ ಜೋಡಿಗಳು ಮದುವೆಯ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲದೇ, ರಸ್ತೆಯ ತಿರುವಿನಲ್ಲಿಯೂ ಈ ಫೋಟೋ ಶೂಟ್ ಮಾಡಲಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಮೊಬೈಲ್ ಸೆಲ್ಫಿಗೆ, ಫೋಟೋ ತೆಗೆಯಲು ನಿಷೇಧವಿದ್ದರೂ ಕೂಡಾ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರು-ಧರ್ಮಸ್ಥಳ ಸಂಪರ್ಕ ಮಾಡುವ ಚಾರ್ಮಾಡಿ ಘಾಟಿಯಲ್ಲಿ ಈ ರೀತಿಯ ಘಟನೆ ನಡೆದಿರುವುದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.