ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಈಡೀ ಭಾರತವೇ ಲಾಕ್ಡೌನ್ ಆಗಿದ್ದು, ಈ ಲಾಕ್ಡೌನ್ಗೆ ಆದೇಶ ಗಾಳಿಗೆ ತೂರಿ ಕೆರೆ ಮೀನು ಖರೀದಿಗಾಗಿ ಜನ ಮುಗಿಬಿದ್ದಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಅಜ್ಜಂಪುರದ ಕಲ್ಕೆರೆ ಗ್ರಾಮದಲ್ಲಿರುವ ಬಳ್ಳೇಕೆರೆಯಲ್ಲಿ ಮೀನು ಹಿಡಿಯಲಾಗಿದೆ.
ಲಾಕ್ಡೌನ್ ಆದೇಶ ಗಾಳಿಗೆ ತೂರಿ ಕೆರೆ ಮೀನು ಖರೀದಿಗೆ ಮುಗಿಬಿದ್ದ ಜನ - ಲಾಕ್ಡೌನ್ ನಿಯಮ
ದೇಶದಾದ್ಯಂತ ಕೊರೊನಾ ವೈರಸ್ ವಿರುದ್ಧ ಹೋರಾಡುವ ದೃಷ್ಟಿಯಿಂದ ಲಾಕ್ಡೌನ್ ಜಾರಿಮಾಡಲಾಗಿದೆ. ಹೀಗಿದ್ದರೂ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಯಾರು ಮನೆಯಿಂದ ಹೊರಬರದಂತೆ ಮನವಿ ಮಾಡಲಾಗಿದೆ. ಆದರೆ, ಈ ಎಲ್ಲ ಆದೇಶಗಳನ್ನೂ ಧಿಕ್ಕರಿಸಿ ಅಜ್ಜಂಪುರದಲ್ಲಿ ನೂರಾರು ಜನ ಯಾವುದೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳದೇ ಕೆರೆ ಮೀನು ಖರೀದಿಗೆ ಆಗಮಿಸಿದ ಘಟನೆ ನಡೆದಿದೆ. .
ಲಾಕ್ಡೌನ್ ಆದೇಶ ಗಾಳಿಗೆತೂರಿ ಕೆರೆ ಮೀನು ಖರೀದಿಗೆ ಮುಗಿಬಿದ್ದ ಜನ
ಈ ವೇಳೆ, ಜನರು ಮೀನು ಖರೀದಿಸಲು ನೂರಾರು ಮುಗಿಬಿದ್ದಿದ್ದು ಕಂಡುಬಂದಿದೆ. ಅಲ್ಲದೇ ಇಲ್ಲಿಗೆ ಆಗಮಿಸಿದ ಬಹುತೇಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಮರೆತು ಮೀನು ಖರೀದಿಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ, ವಿಡಿಯೋ ಮಾಡಲು ಮುಂದಾದಾಗ ಅಂತವರಿಗೆ ಮೀನು ಕೊಡಬೇಡಿ ಎಂದು ಕೆಲವರು ಆಗ್ರಹಿಸಿದ್ದರು.
ಇನ್ನೂ ಕೆಲವು ಸ್ಥಳೀಯರು ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಈ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.