ಚಿಕ್ಕಮಗಳೂರು: ಕೊರೊನಾ ಭೀತಿ ಹಾಗೂ ಲಾಕ್ ಡೌನ್ ನಡುವೆಯೂ ಚಿಕ್ಕಮಗಳೂರಿನ ಎಪಿಎಂಸಿಯಲ್ಲಿ ಜನರು ತುಂಬಿ ತುಳುಕುತಿದ್ದಾರೆ. ಚಿಕ್ಕಮಗಳೂರಿನಿಂದ ತರಕಾರಿ ತೆಗೆದುಕೊಂಡು ಹೋಗಲು ಕಾಸರಗೋಡು ಲಾರಿಗಳು ಆಗಮಿಸಿದ್ದು, ಮಂಗಳೂರು ಚೆಕ್ ಪೋಸ್ಟ್ ಮೂಲಕ ಲಾರಿಗಳು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿವೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಚಿಕ್ಕಮಗಳೂರು ಎಪಿಎಂಸಿಯಲ್ಲಿ ಮುಗಿಬಿದ್ದ ಜನ! - ತರಕಾರಿ ವ್ಯಾಪಾರ
ಪೊಲೀಸರ ಸೂಚನೆಗೂ ಬಗ್ಗದೆ ಜನರು ತರಕಾರಿ ಖರೀದಿಯಲ್ಲಿ ಬ್ಯುಸಿ ಆಗಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದರೂ ಜನರು ತಲೆ ಕೆಡಿಸಿಕೊಳ್ಳುತಿಲ್ಲ.
ಕಾಸರಗೋಡು ತರಕಾರಿ ದಲ್ಲಾಳಿ ನೇರವಾಗಿ ಈ ಮಾತು ಹೇಳಿದ್ದು, ಕೊರೊನಾ ಡೇಂಜರ್ ನಡುವೆ ಕಾಸರಗೋಡು ಲಾರಿಗಳು ಜಿಲ್ಲೆಗೆ ಆಗಮಿಸುತ್ತಿವೆ. ವಾರಕ್ಕೆ ನಾಲ್ಕು ದಿನ ಎಪಿಎಂಸಿಯಲ್ಲಿ ವ್ಯಾಪಾರ ಮಾಡಲು ಲಾರಿಗಳ ಮೂಲಕ ದಲ್ಲಾಳಿಗಳು ಚಿಕ್ಕಮಗಳೂರು ಜಿಲ್ಲೆಗೆ ಅಗಮಿಸುತ್ತಿದ್ದಾರೆ. ಇನ್ನೊಂದು ಕಡೆ ಜನರು ಸಾಮಾಜಿಕ ಅಂತರ ಗಾಳಿಗೆ ತೂರಿದ್ದು,ಎಪಿಎಂಸಿಯಲ್ಲಿ ಜನರು ತರಕಾರಿ ತೆಗೆದುಕೊಂಡು ಹೋಗಲು ಮುಗಿ ಬಿದ್ದಿದ್ದಾರೆ.
ಪೊಲೀಸರ ಸೂಚನೆಗೂ ಬಗ್ಗದೆ ಜನರು ತರಕಾರಿ ಖರೀದಿಯಲ್ಲಿ ಬ್ಯುಸಿ ಆಗಿದ್ದಾರೆ. 1000ಕ್ಕೂ ಹೆಚ್ಚು ಜನರಿಂದ ತರಕಾರಿ ಖರೀದಿ ನಡೆಯುತ್ತಿದ್ದು, ಚಿಕ್ಕಮಗಳೂರು ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ. ಪೊಲೀಸರು ಲಾಠಿ ತೋರಿಸಿದರೂ ವ್ಯಾಪಾರ ಜೋರಾಗಿಯೇ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದರೂ ಜನರು ತಲೆ ಕೆಡಿಸಿಕೊಳ್ಳುತಿಲ್ಲ.