ಕರ್ನಾಟಕ

karnataka

ETV Bharat / state

ಎಪಿಎಂಸಿಯಲ್ಲಿ ಸಾಮಾಜಿಕ ಅಂತರಕ್ಕೆ ಜನರ ನಿರ್ಲಕ್ಷ್ಯ: ಪೊಲೀಸರಿಂದ ಲಾಠಿಯಿಂದ ಪಾಠ - laty charge by police chikkamagaluru

ಲಾಕ್ ಡೌನ್ ಇದ್ದರೂ ಕೂಡ ನಗರದ ಎಪಿಎಂಸಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಇರುವ ಜನರಿಗೆ ಪೊಲೀಸರು ಲಾಠಿ ಬೀಸಿದರು.

laty charge by police
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ

By

Published : Apr 8, 2020, 1:38 PM IST

ಚಿಕ್ಕಮಗಳೂರು:ಕೊರೊನಾ ವೈರಸ್ ಭೀತಿಯ ಕಾರಣ ಲಾಕ್ ಡೌನ್ ಇದ್ದರೂ ನಗರದ ಎಪಿಎಂಸಿಯಲ್ಲಿ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದರು. ಜನರ ಅತಿರೇಕದ ವರ್ತನೆಯನ್ನು ತಹಬದಿಗೆ ತರಲು ಪೊಲೀಸರು ಲಾಠಿ ಬೀಸಬೇಕಾಯ್ತು.

ಎಪಿಎಂಸಿಯಲ್ಲಿ ತರಕಾರಿ ತೆಗೆದುಕೊಂಡು ಹೋಗಲು ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಗ್ರಾಹಕರು, ವ್ಯಾಪಾರಸ್ಥರು ಹಾಗೂ ಮಧ್ಯವರ್ತಿಗಳಿಂದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಈ ವೇಳೆ, ಸಾಮಾಜಿಕ ಅಂತರ ಆದೇಶಕ್ಕಷ್ಟೇ ಸೀಮಿತವಾದಂತಿತ್ತು. ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಲು ಹರಸಾಹಸ ಪಟ್ಟರು. ಕೊನೆಗೆ ಅನ್ಯ ದಾರಿ ಕಾಣದೆ ಲಾಟಿ ಮೂಲಕವೇ ಬಿಸಿ ಮುಟ್ಟಿಸಿದರು.

ABOUT THE AUTHOR

...view details