ಚಿಕ್ಕಮಗಳೂರು:ಸ್ಯಾಂಡಲ್ವುಡ್ ನಟಪುನೀತ್ ರಾಜ್ಕುಮಾರ್ ಫ್ಲೆಕ್ಸ್ ಅನ್ನು ಹರಿದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಪುನೀತ್ ರಾಜ್ಕುಮಾರ್ ಫ್ಲೆಕ್ಸ್ ಹರಿದು ಹಾಕಿದ ಯುವಕನಿಗೆ ಧರ್ಮದೇಟು - ಅಪ್ಪು ಫೋಟೋ ಹರಿದು ಹಾಕಿದ ಯುವಕನಿಗೆ ಥಳಿಸಿದ ಯುವಕರು
ನಟ ಪುನೀತ್ ರಾಜ್ಕುಮಾರ್ ಫ್ಲೆಕ್ಸ್ ಹರಿದಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಪುನೀತ್ ರಾಜ್ಕುಮಾರ್ ಫ್ಲೆಕ್ಸ್ ಹರಿದು ಹಾಕಿದ ಯುವಕನಿಗೆ ಥಳಿತ
ಪುನೀತ್ ಫ್ಲೆಕ್ಸ್ ಹರಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಫ್ಲೆಕ್ಸ್ ಹರಿದ ಯುವಕನನ್ನು ಪತ್ತೆ ಹಚ್ಚಿ, ಹರಿದ ಫ್ಲೆಕ್ಸ್ ಅನ್ನು ಅವನ ಮೇಲೆ ಹೊದಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ದೇವರಿಗೆ ಮುಡಿ, ಅಪ್ಪುಗೆ ಹಾಡು: ನಟಿ ವಿಜಯಲಕ್ಷ್ಮೀ ಗಾನ ನಮನ