ಚಿಕ್ಕಮಗಳೂರು: ಕೋವಿಡ್ ಚಿಕಿತ್ಸೆಗಾಗಿ 9,25,601 ಲಕ್ಷ ರೂ. ಬಿಲ್ ಮಾಡಿ, ಬಿಲ್ಗೆ 1 ರೂಪಾಯಿ ಡಿಸ್ಕೌಂಟ್ ನೀಡಿರುವ ವಿಚಿತ್ರ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಕೊರೊನಾದಿಂದ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ಖಾಸಗಿ ಆಸ್ಪತ್ರೆ (ಆಶ್ರಯ)ಯ ಬಿಲ್ ಶಾಕ್ ನೀಡಿದ್ದು, ಮತ್ತಷ್ಟು ನೋವುಂಟು ಮಾಡಿದೆ.
ಕೊರೊನಾಗೆ ವೃದ್ಧ ಬಲಿ: 9.25 ಲಕ್ಷ ಬಿಲ್ ಕೊಟ್ಟು ಒಂದೇ ರೂಪಾಯಿ ಡಿಸ್ಕೌಂಟ್ ನೀಡಿದ ಆಸ್ಪತ್ರೆ! - chickmagaluru latest news
ಕಡೂರು ತಾಲೂಕಿನ ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ ನೀಡಿದ ಚಿಕಿತ್ಸೆಗಾಗಿ 9,25,601 ಲಕ್ಷ ರೂ. ಬಿಲ್ ಮಾಡಿ, ಬಿಲ್ಗೆ 1 ರೂಪಾಯಿ ಡಿಸ್ಕೌಂಟ್ ನೀಡಿದೆ. ಇದನ್ನು ಕಂಡ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
![ಕೊರೊನಾಗೆ ವೃದ್ಧ ಬಲಿ: 9.25 ಲಕ್ಷ ಬಿಲ್ ಕೊಟ್ಟು ಒಂದೇ ರೂಪಾಯಿ ಡಿಸ್ಕೌಂಟ್ ನೀಡಿದ ಆಸ್ಪತ್ರೆ! people are shocked for hospital bill of corona treatment](https://etvbharatimages.akamaized.net/etvbharat/prod-images/768-512-8844041-thumbnail-3x2-ckm.jpg)
ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಬಿಲ್ಗೆ ಸಾರ್ವಜನಿಕರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಬಿಲ್ನಿಂದ ಕಂಗೆಟ್ಟಿರುವ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಕಡೂರು ತಾಲೂಕಿನ ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ನಂತರ ಇಷ್ಟು ಮೊತ್ತದ ಹಣಕ್ಕಾಗಿ ಆಸ್ಪತ್ರೆ ಡಿಮ್ಯಾಂಡ್ ಮಾಡಿ ಅದನ್ನು ಕುಟುಂಬದ ಸದಸ್ಯರಿಂದ ಪಡೆದುಕೊಂಡಿರುವುದಕ್ಕೆ ಜನರು ಅಸಮಾಧಾನ ಹೊರ ಹಾಕುತ್ತಿದ್ದಾರೆ.